Posts Slider

Karnataka Voice

Latest Kannada News

ಧಾರವಾಡ ಜಿಲ್ಲೆಯಲ್ಲಿ ಮರಣ ಮೃದಂಗ ಮೂರು ದಿನಗಳ ಅವಧಿಯಲ್ಲಿ ಏಳು ಸಾವು: ಇಂದು 89 ಕೊರೋನಾ ಪಾಸಿಟಿವ್

1 min read
Spread the love

ಧಾರವಾಡ: ಜಿಲ್ಲೆಯಲ್ಲಿ ಮತ್ತೆ ಕೊರೋನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾಗಿದ್ದು, ಮೂರು ದಿನಗಳ ಅವಧಿಯಲ್ಲಿ ಏಳು ಜನ ಕೊರೋನಾ ಪಾಸಿಟಿವ್ ಗೆ ಬಲಿಯಾಗಿದ್ದು, ಜಿಲ್ಲೆಯಲ್ಲಿ ಒಟ್ಟು 757 ಪ್ರಕರಣಗಳಾಗಿದ್ದು, 20ಜನ ತೀರಿಕೊಂಡಂತಾಗಿದೆ.

ಈಗಾಗಲೇ ಧಾರವಾಡ ಜಿಲ್ಲೆಯಲ್ಲಿ ಒಟ್ಟು 276 ಜನ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, 461 ಪ್ರಕರಣಗಳು ಸಕ್ರಿಯವಾಗಿವೆ.

ಕೋವಿಡ್ :ಮೂರು ದಿನಗಳ ಅವಧಿಯಲ್ಲಿ ಏಳು ಜನ ಮರಣ

ಧಾರವಾಡ:  ಕೋವಿಡ್ ನಿಂದಾಗಿ ಕಳೆದ ಮೂರು ದಿನಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಏಳು ಜನ ಮೃತಪಟ್ಟಿದ್ದು ಒಟ್ಟು ಸಾವಿನ ಸಂಖ್ಯೆ ಇಪ್ಪತ್ತಕ್ಕೆ ಏರಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದ್ದಾರೆ.

ಪಿ-28497 ( 70 ವರ್ಷ, ಪುರುಷ) ಹಾವೇರಿ ಜಿಲ್ಲೆಯವರು, ಜುಲೈ 5 ರಂದು ಮರಣ ಹೊಂದಿದ್ದಾರೆ. ನಿನ್ನೆ ಜುಲೈ 7 ರಂದು ಕೋವಿಡ್ ದೃಢಪಟ್ಟಿದೆ.

ಪಿ-28461 (54 ವರ್ಷ, ಮಹಿಳೆ) ಗದಗ ಜಿಲ್ಲೆಯ ಮುಂಡರಗಿ ತಾಲ್ಲೂಕಿನ ಹಮ್ಮಿಗಿ ಗ್ರಾಮದವರು.ತೀವ್ರ ಉಸಿರಾಟದ ತೊಂದರೆಯಿಂದ ಎಸ್ ಡಿ ಎಂ ಆಸ್ಪತ್ರೆಯಲ್ಲಿ ಜುಲೈ 6 ರಂದು ಮೃತಪಟ್ಟಿದ್ದಾರೆ.

ಪಿ- 28451 ( 65 ವರ್ಷ, ಪುರುಷ) ಬಳ್ಳಾರಿ ಜಿಲ್ಲೆಯ ಹೊಸಪೇಟೆಯವರು ಎಸ್ ಡಿ ಎಂ ಆಸ್ಪತ್ರೆಯಲ್ಲಿ ನಿನ್ನೆ ಜುಲೈ 7 ರಂದು ಮೃತಪಟ್ಟಿದ್ದಾರೆ.

ಪಿ-28450 ( 62 ವರ್ಷ, ಪುರುಷ) ಹುಬ್ಬಳ್ಳಿ ನಗರದ ಮಂಟೂರ ರಸ್ತೆ ನಿವಾಸಿ.ಜುಲೈ 5 ರಂದು ಮೃತಪಟ್ಟಿದ್ದಾರೆ.

ಪಿ- 28431 ( 85 ವರ್ಷ,ಮಹಿಳೆ) ಶಸ್ತ್ರಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್ ಗೆ ಜುಲೈ 6 ರಂದು ಬಂದಿದ್ದರು ಆಗ ಮೂಗು ಮತ್ತು ಗಂಟಲು ದ್ರವ ಪರೀಕ್ಷೆಗೆ ತೆಗೆದುಕೊಂಡು ಮನೆಗೆ ಕಳುಹಿಸಲಾಗಿತ್ತು.  ಮನೆಗೆ ಹೋದ ನಂತರ ಸಾವಿಗೀಡಾಗಿದ್ದಾರೆ..ಕೋವಿಡ್ ವರದಿ ಜುಲೈ 7 ರಂದು ಬಂದಿದೆ.

ಪಿ-18713 ( 34 ವರ್ಷ, ಪುರುಷ) ನವಲಗುಂದ ತಾಲೂಕು ಶಿರಕೋಳದವರು.ಜುಲೈ 6 ರಂದು ಮೃತಪಟ್ಟಿದ್ದಾರೆ.

ಪಿ-20056 ( 65 ವರ್ಷ, ಪುರುಷ) ಮೊರಬ ಗ್ರಾಮದವರು, ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಜುಲೈ 7 ರಂದು ಮೃತಪಟ್ಟಿದ್ದಾರೆ.

ಪಾರ್ಥಿವ ಶರೀರಗಳನ್ನು ಜಿಪ್ ಉಳ್ಳ ಎರಡು ಲೇಯರ್ ಕವರ್ ಗಳಲ್ಲಿ ನಿಯಮಾನುಸಾರ ಮುಚ್ಚಿ, ಶವಸಂಸ್ಕಾರ ನಿರ್ವಹಿಸಲಾಗಿದೆ.


Spread the love

Leave a Reply

Your email address will not be published. Required fields are marked *

You may have missed