ಧಾರವಾಡದಲ್ಲಿ ಇಂದು 60 ಕೊರೋನಾ ಪಾಸಿಟಿವ್ ಪ್ರಕರಣ…!

ಬೆಂಗಳೂರು: ರಾಜ್ಯದಲ್ಲಿಯೂ ಎರಡನೇ ಅಲೆಯ ಕೊರೋನಾ ಹೆಚ್ಚಾಗುತ್ತಿದ್ದು, ಒಂದೇ ದಿನಕ್ಕೆ 3082 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಬೆಂಗಳೂರು ನಗರವೊಂದರಲ್ಲೇ 2004 ಕೊರೋನಾ ಪ್ರಕರಣಗಳು ಪತ್ತೆಯಾಗಿವೆ.
ಜಿಲ್ಲಾವಾರು ವಿವರ ಇಲ್ಲಿದೆ ನೋಡಿ…

ಕೊರೋನಾ ತನ್ನ ಅಟ್ಟಹಾಸವನ್ನ ಮತ್ತೆ ಮೆರೆಯಲು ಆರಂಭಿಸಿದೆ ಎಂದು ಹೇಳಲಾಗುತ್ತಿದೆ. ಧಾರವಾಡ ಜಿಲ್ಲೆಯಲ್ಲಿ ಇಂದು 60 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಜಿಲ್ಲೆಯಲ್ಲಿ 243 ಪ್ರಕರಣಗಳು ಸಕ್ರಿಯವಾಗಿವೆ.
ಧಾರವಾಡದಲ್ಲಿ ಇಲ್ಲಿಯವರೆಗೆ 22838 ಸೋಂಕಿತರು ಕಂಡು ಬಂದಿದ್ದು, 21969 ಸೋಂಕಿತರು ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 626 ಜನರು ಕೊರೋನಾದಿಂದ ಸಾವಿಗೀಡಾಗಿದ್ದಾರೆ.