ಕೊರೋನಾ ವೈರಸ್: ದಾವಣಗೆರೆ ಜಿಲ್ಲೆ ಮುಕ್ತ

ದಾವಣಗೆರೆ: ಕೊರೋನಾ ಸೋಂಕಿತ ಮೂರನೇಯ ವ್ಯಕ್ತಿಯ ಪ್ರಕರಣ ಕೂಡಾ ನೆಗೆಟಿವ್ ಬಂದ ಪರಿಣಾಮ ಜಿಲ್ಲೆಯಿಂದ ಸೋಂಕು ಕಡಿಮೆಯಾಗಿದೆ.
ಕಳೆದ ಎರಡು ದಿನದ ಹಿಂದೆ 2ನೇ ವರದಿ ಬಂದಿತ್ತು. ಅವರನ್ನ ರಾಜ್ಯ ಸರಕಾರದ ಆದೇಶದ ಮೇರೆ ಬಿಡುಗಡೆ ಮಾಡಲಾಗಿತ್ತು. ಜಿಲ್ಲೆಯಲ್ಲಿ ಒಟ್ಟು ಮೂರು ಪ್ರಕರಣಗಳು ಪಾಸಿಟಿವ್ ಆಗಿದ್ದವು, ಇದೀಗ ಬಂದ ವರದಿಯ ಪ್ರಕಾರ ಮೂರನೇಯ ವ್ಯಕ್ತಿಗೂ ಪಾಸಿಟಿವ್ ದೂರವಾಗಿದೆ. ಹೀಗಾಗಿ ಜಿಲ್ಲೆಯ ಜನರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.