ಕೊರೋನಾ ಮಹಾಮಾರಿಗೆ ಮತ್ತೋರ್ವ ಪೊಲೀಸ್ ಬಲಿ

ಬೆಂಗಳೂರ: ಕೊರೋನಾ ಮಹಾಮಾರಿ ಯಾರನ್ನೂ ಬಿಡುತ್ತಿಲ್ಲ. ಕೊರೋನಾ ವಾರಿಯರ್ಸ್ ಪೊಲೀಸರನ್ನು ಸಹ ಕೊರೋನಾ ವೈರಸ್ ಬಲಿ ಪಡೆಯುತ್ತಿದೆ. ಈಗಾಗಲೇ ಹಲವರು ಈ ರೋಗಕ್ಕೆ ಬಲಿಯಾಗಿದ್ದು, ಇಂದು ಮತ್ತೋರ್ವರು ಕೊರೋನಾದಿಂದ ಸಾವಿಗೀಡಾಗಿದ್ದಾರೆ.
ಆರ್ ಎಂ ಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ರಾಘವೇಂದ್ರ ಎಂಬ ಪೊಲೀಸ್ ಗೆ ಕೊರೋನಾ ಪಾಸಿಟಿವ್ ದೃಢಪಟ್ಟಿತ್ತು. ಸೋಂಕು ದೃಢಪಟ್ಟ ಕೂಡಲೇ ಎಲೆಕ್ಟ್ರಾನಿಕ್ ಸಿಟಿ ಬಳಿಯ ನಾರಾಯಣ ಹೃದಯಾಲಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ರಾಘವೇಂದ್ರ ಸಾವನ್ನಪ್ಪಿದ್ದಾರೆ.
ಕುಟುಂಬಸ್ಥರ ರೋದನ ಮುಗಿಲು ಮುಟ್ಟಿದೆ. ಮೂಲತಃ ದಾಬಸ್ ಪೇಟೆ ನಿವಾಸಿಯಾಗಿದ್ದ ರಾಘವೇಂದ್ರ ಅವರಿಗೆ ಹೆಂಡ್ತಿ ಇಬ್ಬರು ಚಿಕ್ಕ ಮಕ್ಕಳಿದ್ದಾರೆ. ಕೊರೋನಾ ಸಮಯದಲ್ಲಿ ನಿರಂತರವಾಗಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದ ರಾಘವೇಂದ್ರ ಮೂರ್ನಾಲ್ಕು ದಿನದ ಹಿಂದಷ್ಟೇ ಜ್ವರದಿಂದ ಬಳಲುತ್ತಿದ್ದರು.
ಜ್ವರ ಕಡಿಮೆಯಾಗದ ಹಿನ್ನೆಲೆಯಲ್ಲಿ ಕೊರೋನಾ ಟೆಸ್ಟ್ ಮಾಡಿಸಿದಾಗ ಪಾಸಿಟಿವ್ ಬಂದಿರುವುದು ದೃಢಪಟ್ಟಿತ್ತು. ಇದೀಗ ಚಿಕಿತ್ಸೆ ಫಲಿಸದೇ ಸಾವಾಗೀರುವುದು ಇಲಾಖೆಗೆ ಮತ್ತಷ್ಟು ಬೇಸರ ಮೂಡಿಸಿದೆ.