ಗಣಿನಾಡು ಬಳ್ಳಾರಿಯಲ್ಲಿ ಕೋರೋನಾಗೆ ಮೊದಲ ಬಲಿ

ಬಳ್ಳಾರಿ: 61 ವರ್ಷದ ಬಳ್ಳಾರಿಯ ಸತ್ಯ ನಾರಾಯಣ ಪೇಟೆ ನಿವಾಸಿಯಾಗಿದ್ದ ಕರೋನಾ ಸೋಂಕಿತ ವ್ಯಕ್ತಿ ಮರಣವಪ್ಪಿದ್ದು, ಈ ಮೂಲಕ ಗಣಿನಾಡಿನಲ್ಲೂ ಕೊರೋನಾ ಬಲಿ ಪಡೆದಂತಾಗಿದೆ.
ಒಂದು ತಿಂಗಳ ಹಿಂದೆ ಹಾರ್ಟ್ ಆಪರೇಷನ್ ಗೆ ಒಳಗಾಗಿದ್ದ ವ್ಯಕ್ತಿ. ಮೊನ್ನೆ ಉಸಿರಾಟದ ಸಮಸ್ಯೆಯಿಂದ ಬಳ್ಳಾರಿ ವಿಮ್ಸ್ ಗೆ ದಾಖಲಾಗಿದ್ದರು. ಸೋಂಕಿತ ವ್ಯಕ್ತಿಗೆ ಬಿಪಿ.ಶುಗರ್, ಅಲ್ಲದೆ ಹೃದಯ ಶಸ್ತ್ರ ಚಿಕಿತ್ಸೆಗೆ ಕೂಡಾ ನಡೆದಿತ್ತು. ತೀವ್ರ ಉಸಿರಾಟದ ತೊಂದರೆಯಿಂದಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತಾದರೂ, ಚಿಕಿತ್ಸೆ ಫಲಿಸದೆ ಇಂದು ಮುಂಜಾನೆ ಕೊನೆಯುಸಿರೆಳಿದಿದ್ದಾರೆಂದು ಬಳ್ಳಾರಿ ಜಿಕ್ಲಾಧಿಕಾರಿ SS ನಕುಲ್ ಮಾಹಿತಿ ನೀಡಿದ್ದಾರೆ.