ವಾರದ ರಜೆ ಕೆಲವರಿಗಷ್ಟೇ ಅಲ್ಲ: ಪೊಲೀಸ್ ಕಮೀಷನರ್ ಲಾಬುರಾಮ್ ಖಡಕ್ ಸೂಚನೆ
1 min readಹುಬ್ಬಳ್ಳಿ: ರಾಜ್ಯದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಪೊಲೀಸರಿಗೆ ವಾರದ ರಜೆಯನ್ನ ಕೊಡಲು ಮುಂದಾಗಿರುವ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರ್ ಲಾಬುರಾಮ್ ಅವರು, ಪ್ರತಿಯೊಂದು ರೀತಿಯಲ್ಲಿಯೂ ನೋಡುತ್ತಿದ್ದು, ಅದೇ ಕಾರಣಕ್ಕೆ ಕಟ್ಟುನಿಟ್ಟಿನ ಜ್ಞಾಪನ ಪತ್ರವೊಂದನ್ನ ಎಲ್ಲ ಠಾಣೆಗಳಿಗೂ ಕಳಿಸಿದ್ದಾರೆ.
ವಾರದ ರಜೆಯ ವೇಳಾಪಟ್ಟಿ ತಯಾರಿಸಿ ಸರದಿ ಪ್ರಕಾರ ಕಡ್ಡಾಯವಾಗಿ ಮಂಜೂರಿಸಲು ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರ್ ಸೂಚಿಸಿದ್ದರೂ, ಕೆಲವರನ್ನ ರಜೆಯಿಂದ ದೂರವಿರಿಸೋ ಪ್ರಯತ್ನ ಹಲವು ಠಾಣೆಗಳಲ್ಲಿ ನಡೆದಿತ್ತು, ಎಂಬುದನ್ನ ಪೊಲೀಸ್ ಕಮೀಷನರ್ ಲಾಬುರಾಮ್ ಪತ್ತೆ ಹಚ್ಚಿದ್ದಾರೆ.
ಹಲವು ಠಾಣೆಗಳಲ್ಲಿ ಒಳಗಡೆ ಕೆಲಸ ಮಾಡುವ ಸಿಬ್ಬಂದಿಗಳಾದ ಠಾಣಾ ಬರಹಗಾರರು, ಡಿಓ, ಎಸ್ ಬಿ, ಸೆಂಟ್ರಿ, ನಾರ್ನಿಶಿ ಅವರಿಗೆ ವಾರದ ರಜೆ ಹೋಗಲು ಬಿಡುತ್ತಿಲ್ಲ ಎಂಬುದನ್ನ ಪೊಲೀಸ್ ಕಮೀಷನರ್ ಅವರಿಗೆ ಅನಾಮಧೇಯ ಪತ್ರವೊಂದು ಹೇಳಿದೆ.
ಇದೇ ಕಾರಣಕ್ಕೆ ಮತ್ತೆ ಜ್ಞಾಪನ ಪತ್ರವೊಂದನ್ನ ಡಿಸಿಪಿ ಹಾಗೂ ಎಸಿಪಿಗಳಿಗೆ ಕಳಿಸಿ, ಇದನ್ನ ಪಾಲಿಸುವಂತೆ ಇನ್ಸಪೆಕ್ಟರುಗಳಿಗೆ ಸೂಚನೆ ನೀಡಿದ್ದಾರೆ.