ಸಚಿವ ಮಾಧುಸ್ವಾಮಿ ವಿರುದ್ಧ ದೂರು ದಾಖಲು ಮಾಡಿದ ಕಾಂಗ್ರೆಸ್
1 min readಬೆಂಗಳೂರು: ಸಚಿವ ಮಾಧುಸ್ವಾಮಿ ವಿರುದ್ಧ ಮತ್ತೊಂದು ದೂರು ಕೊಟ್ಟ ಕಾಂಗ್ರೆಸ್. ಕರ್ನಾಟಕ ಕಿಸಾನ್ ಕಾಂಗ್ರೆಸ್ ವತಿಯಿಂದ ಡಿಜಿ ಐಜಿಪಿ ಪ್ರವೀಣ್ ಸೂದ್ ಅವರಿಗೆ ದೂರು ಕೊಡಲಾಗಿದೆ.
ಕೋಲಾರದಲ್ಲಿ ಸಚಿವ ಮಾಧುಸ್ವಾಮಿ ಅವರು ರೈತ ಮಹಿಳಿಗೆ ತುಚ್ಚ ಶಬ್ದಗಳಿಂದ ನಿಂದಿಸಿದ್ದಾರೆ. ಮಾಧುಸ್ವಾಮಿ ಅವರ ವಿರುದ್ಧ ಪ್ರಕರಣ ದಾಖಲಿಸಿ ಪ್ರಾಥಮಿಕ ತನಿಖೆ ಕೈಗೊಳ್ಳಬೇಕು. ಹದಿನಾಲ್ಕನೆಯ ಶತಮಾನದ ರಾಸ್ಕಲ್ ಎಂದರೆ ಕಡಿಮೆ ವರ್ಗದ ಜನರು ಎಂದು. ರೈತರನ್ನು ಕಡಿಮೆ ವರ್ಗದ ಜನರೆಂದು ಕರೆದ ಮಾಧುಸ್ವಾಮಿ ವಿರುದ್ಧ ಐಪಿಸಿ ಸೆಕ್ಷನ್ 294 ಅಡಿಯಲ್ಲಿ ಕೇಸ್ ದಾಖಲಿಸಬೇಕು ಎಂದು ಸಚಿನ್ ಮೀಗಾ ಮನವಿ ಮಾಡಿದ್ದಾರೆ.
ದೂರು ದಾಖಲಿಸಿದ ಪ್ರತಿ ಹೀಗಿದೆ..
ಗೆ, 22:05::2020
ಶ್ರೀ.ಪ್ರವೀಣ್ ಸೂದ್
ಪೊಲೀಸ್ ಮಹಾನಿರ್ದೇಶಕರು
ಕರ್ನಾಟಕ ಪೊಲೀಸ್ ಇಲಾಖೆ.
ದಿನಾಂಕ 20/05/2020 ರಂದು ಕೋಲಾರ ಜಿಲ್ಲೆಯಲ್ಲಿ ಕರ್ನಾಟಕ ಸರ್ಕಾರದ ಕಾನೂನು ಸಚಿವರಾಗಿರುವ .ಮಾನ್ಯ ಮಾಧುಸ್ವಾಮಿಯವರು, ತನ್ನ ಬಳಿ ಅಹವಾಲು ನೀಡಲು ರೈತ ಸಂಘದ ಮಹಿಳೆಯೊಬ್ಬರು, ಕಷ್ಟ ತೋಡಿಕೊಳ್ಳಲು ಬಂದಾಗ ನಿರ್ಲಕ್ಷ ಮನೋಭಾವನೆಯಿಂದ, ತಮ್ಮ ಸಚಿವ ಸ್ಥಾನದ ಘನತೆ ಮರೆತು ದೌರ್ಜನ್ಯದಿಂದ “ನಾನು ಬಾರಿ ಕೆಟ್ಟ ಮನುಷ್ಯ ಇದ್ದಿನಿ.. ಬಾಯಿ ಮುಚ್ಚು ರಾಸ್ಕಲ್” ಎಂಬ ತುಚ್ಚ ಶಬ್ದಗಳಿಂದ ನಿಂದಿಸಿ ಅವಹೇಳನ ಮಾಡಿದ್ದಾರೆ. ಇದು ಪ್ರಜಾಪ್ರಭುತ್ವ ವಿರೋಧಿ ನಡವಳಿಕೆ ಹದಿನಾಲ್ಕನೆಯ ಶತಮಾನದ ರಾಸ್ಕಲ್ ಎಂದರೆ “ಕಡಿಮೆ ವರ್ಗದ ಜನರು”
*ರೈತರನ್ನು ಕಡಿಮೆ ವರ್ಗದ ಜನರೆಂದು ಕರೆದ ಮಾನ್ಯ ಕಾನೂನು ಸಚಿವ ಮಾದುಸ್ವಾಮಿ ವಿರುದ್ಧ ಐ. ಪಿ.ಸಿ. ಸೆಕ್ಷನ್ 294 ಅಡಿಯಲ್ಲಿ ಕೇಸ್ ದಾಖಲಿಸಬೇಕು ಆದ್ದರಿಂದ ಭಾರತೀಯ ದಂಡ ಸಂಹಿತೆ 294 ರ ಅಡಿಯಲ್ಲಿ ಪ್ರಕರಣ ದಾಖಲಿಸಿ ಪ್ರಾಥಮಿಕ ತನಿಖೆ ಕೈಗೊಳ್ಳಬೇಕೆಂದ ಕೋರುತ್ತೇನೆ.
ನಿಮ್ಮ ವಿಶ್ವಾಸಿ
ಸಚಿನ್ ಮೀಗಾ
ಅಧ್ಯಕ್ಷರು
ಕರ್ನಾಟಕ ಕಿಸಾನ್ ಕಾಂಗ್ರೆಸ್