ಧಾರವಾಡದಲ್ಲಿ “ಬಸ್ಕಿ” ಪೊಲೀಸ್ ಕಮೀಷನರ್ ಅಸಮಾಧಾನ…!
1 min readಧಾರವಾಡ: ಕೊರೋನಾ ನಿಯಮಗಳನ್ನ ಉಲ್ಲಂಘನೆ ಮಾಡಿದ ಯುವಕನಿಗೆ ಧಾರವಾಡದ ಟೋಲನಾಕಾ ಬಳಿ ಸಂಚಾರಿ ಠಾಣೆಯ ಎಎಸ್ಐಯೋರ್ವರು ಬಸ್ಕಿ ಹೊಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಕಮೀಷನರ್ ಲಾಬುರಾಮ್ ಅವರು ಅಸಮಾಧಾನಗೊಂಡಿದ್ದಾರೆ.
ವೈರಲ್ ಆಗಿದ್ದ ವೀಡಿಯೋ…
ಬೆಳಿಗ್ಗೆ ಹತ್ತು ಗಂಟೆಯಿಂದ ಕೊರೋನಾ ಕರ್ಪ್ಯೂ ಆರಂಭವಾಗಿದ್ದರೂ ಸುಖಾಸುಮ್ಮನೆ ಬಂದ ಯುವಕನಿಗೆ ಎಚ್ಚರಿಕೆ ರೀತಿಯಲ್ಲಿ ಬಸ್ಕಿ ಹೊಡೆಸಲಾಗಿತ್ತು. ಈ ವೀಡಿಯೋ ಕೆಲವೇ ನಿಮಿಷಗಳಲ್ಲಿ ಸಾಕಷ್ಟು ವೈರಲ್ ಆಗಿದ್ದರಿಂದ, ತಕ್ಷಣವೇ ಪೊಲೀಸ್ ಕಮೀಷನರ್ ಈ ಬಗ್ಗೆ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ಸೂಚನೆಯನ್ನ ನೀಡಿದ್ದಾರೆ.
ಅವಳಿನಗರದಲ್ಲಿ ಯಾವುದೇ ಕಾರಣಕ್ಕೂ ಸಿಬ್ಬಂದಿಗಳಾಗಲಿ, ಅಧಿಕಾರಿಗಳಾಗಲಿ ಬಸ್ಕಿಯಂತಹ ಶಿಕ್ಷೆಯನ್ನ ಕೊಡುವುದು ಸೂಕ್ತವಲ್ಲ. ನಿಯಮ ಉಲ್ಲಂಘನೆ ಮಾಡಿದ್ದರೇ, ವೀಡಿಯೋ ಮಾಡಿ ವಾಹನಗಳನ್ನ ಸೀಜ್ ಮಾಡಿ ಎಂದು ಹೇಳಿದ್ದಾರೆ.
ಬಸ್ಕಿ ಹೊಡೆಸುವುದು, ಪ್ರಾಂಗ್ ಜಂಪ್ ಮಾಡಿಸುವುದು ಕಂಡು ಬಂದರೇ ಅಂತವರ ಮೇಲೆ ಶಿಸ್ತು ಕ್ರಮವನ್ನ ಜರುಗಿಸುವುದಾಗಿ ಪೊಲೀಸ್ ಕಮೀಷನರ್ ಖಡಕ್ ವಾರ್ನಿಂಗ್ ನೀಡಿದ್ದಾರೆಂದು ಗೊತ್ತಾಗಿದೆ.