ಫಾದರ್ ಲೈಗಿಂಕ ಕಿರುಕುಳ ಆರೋಪ: ಪೊಲೀಸ್ ಕಮೀಷನರ್ ಕಚೇರಿ ಎದುರೇ ಆತ್ಮಹತ್ಯೆ ಯತ್ನ
1 min readಕಲಬುರಗಿ: ಲಾಕ್ ಡೌನ್ ಸಮಯದಲ್ಲಿಯೂ ಬಿಡದೇ ಲೈಗಿಂಕ್ ಕಿರುಕುಳವನ್ನ ಫಾದರ್ ನೀಡಿದ್ದ ಆರೋಪ ಮಾಡಿದ್ದ ಮಹಿಳೆ, ತನಗೆ ನ್ಯಾಯ ಸಿಗುತ್ತಿಲ್ಲವೆಂದು ಕಲಬುರಗಿ ಪೊಲೀಸ್ ಕಮೀಷನರ್ ಕಚೇರಿ ಆವರಣದಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಕಲಬುರಗಿ ನಗರದ ಸೆಂಟ್ ಮೇರಿ ಕ್ಯಾಥೋಡ್ರಾಲ್ ಚರ್ಚ್ ನಲ್ಲಿ ಕುಕ್ ಆಗಿ ಕೆಲಸ ಮಾಡುತ್ತಿದ್ದ ಆಶಾ ಮೇರಿ, ತನ್ನ ಸ್ನೇಹಿತೆ ಮೇರಿ ಬದಲಾಗಿ ಲಾಕ್ ಡೌನ್ ವೇಳೆ ಅಡುಗೆ ಕೆಲಸವನ್ನ ಮಾಡುತ್ತಿದ್ದರು. ಆಗ ಫಾದರ್ ಕ್ಲೀವನ್ ರಿಂದ ಲೈಗಿಂಕ ಕಿರುಕುಳ ಮಾಡಿದ್ದು, ದೇಹ ಮುಟ್ಟಿ, ಗಟ್ಟಿಯಾಗಿ ತಬ್ಬಿಕೊಂಡು ಕಿಸ್ ಕೊಡುವಂತೆ ಕ್ಲೀವನ್ ಫಾದರ್ ಪೀಡಿಸಿದ್ದ ಎಂದು ಮಹಿಳೆ ಆರೋಪಿಸಿದ್ದರು.
ಈ ಹಿನ್ನೆಲೆಯಲ್ಲಿ ಆಶಾಮೇರಿ ಸೈಬರ್ ಕ್ರೈಂ ಠಾಣೆಗೆ ವಿಚಾರಣೆಗೆ ಆಗಮಿಸಿದ್ದರು. ಇದೇ ಸಮಯದಲ್ಲಿ ನನಗೆ ನ್ಯಾಯ ಸಿಗುತ್ತಿಲ್ಲ ಅನ್ನೋ ಕಾರಣಕ್ಕಾಗಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ತೀವ್ರವಾಗಿ ಬಳಲಿದ ಆಶಾಮೇರಿಯವರನ್ನ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಈ ಘಟನೆಯಿಂದ ಕಮೀಷನರ್ ಕಚೇರಿ ಆವರಣದಲ್ಲಿ ಕೆಲಕಾಲ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು.