“ತೆರೆದ ಮನೆ” ಮತ್ತೂ ಹು-ಧಾ ಕಮೀಷನರೇಟ್…

ಸಾರ್ವಜನಿಕರಿಗೆ ಹತ್ತಿರವಾಗಲು ಹೊಸ ಸ್ವರೂಪ
ತೆರೆದ ಮನೆಯಲ್ಲಿ ಕಲರವ
ಹುಬ್ಬಳ್ಳಿ: ಅವಳಿನಗರದ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಪೊಲೀಸರು ವಿನೂತನವಾದ ಕಾರ್ಯಕ್ರಮವನ್ನ ಆಯೋಜನೆ ಮಾಡಿ, ತಿಳಿಯದ ವಯಸ್ಸಿನವರಿಗೂ ಬದುಕುವ ಪಾಠ ಮಾಡುತ್ತಿದ್ದಾರೆ.
ಹೌದು… ಪ್ರಮುಖ ಶಾಲೆಗಳ ವಿದ್ಯಾರ್ಥಿಗಳ ಹಿಂಡು ಪೊಲೀಸ್ ಠಾಣೆಗಳಿಗೆ ಬರುತ್ತಿದೆ. ಅವರುಗಳಿಗೆ ಮಕ್ಕಳಂತೆ ಶಿಕ್ಷಕರ ರೂಪದಲ್ಲಿ ತಿಳುವಳಿಕೆ ನೀಡಲು ಪ್ರತಿ ಠಾಣೆಯ ಸಿಬ್ಬಂದಿಗಳು ಸನ್ನದ್ಧರಾಗಿದ್ದಾರೆ.
ಕಾರ್ಯವೈಖರಿಯ ವೀಡಿಯೋ..
ಕಮೀಷನರೇಟ್ ವ್ಯಾಪ್ತಿಯಲ್ಲಿ ಆರಂಭವಾಗಿರುವ ತೆರೆದ ಮನೆ ಸಾಕಷ್ಟು ಯಶಸ್ವಿಯಾಗುತ್ತಿದ್ದು, ಸಾರ್ವಜನಿಕರಿಂದಲೂ ಮನ್ನಣೆ ಗಳಿಸುತ್ತಿದೆ. ಮಕ್ಕಳಿಗೆ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗುತ್ತಿದೆ.