ಫೀಲ್ಡಿಗಿಳಿದ ಪೊಲೀಸ್ ಕಮೀಷನರ್ ಲಾಬುರಾಮ್…!
1 min readಧಾರವಾಡ: ಸಾರಿಗೆ ನೌಕರರ ಪ್ರತಿಭಟನೆಯ ಹಿನ್ನೆಲೆಯಲ್ಲಿ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರ್ ಸ್ವತಃ ತಾವೇ ಬೆಳ್ಳಂಬೆಳಿಗ್ಗೆಯಿಂದಲೇ ಫೀಲ್ಡಿಗಿಳಿದಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತೆ ವಹಿಸಿದ್ದಾರೆ.
ಇಂದು ಬೆಳಿಗ್ಗೆ ಧಾರವಾಡದ ಸಿಬಿಟಿಗೆ ಆಗಮಿಸಿದ್ದ ಪೊಲೀಸ್ ಕಮೀಷನರ್ ಲಾಬುರಾಮ್ ಅವರು, ಶಹರ ಠಾಣೆ ಇನ್ಸಪೆಕ್ಟರ್ ಹಾಗೂ ಧಾರವಾಡದ ಎಸಿಪಿಯವರಿಂದ ಮಾಹಿತಿಯನ್ನ ಪಡೆದು, ಕಟ್ಟುನಿಟ್ಟಿನ ಕ್ರಮವನ್ನ ಜರುಗಿಸುವಂತೆ ಆದೇಶ ನೀಡಿದ್ದಾರೆ.
ಸಾರಿಗೆ ಸಂಸ್ಥೆಯ ಬಸ್ ಗಳು ಬಂದ್ ಆಗಿರುವ ಹಿನ್ನೆಲೆಯಲ್ಲಿ ಬದಲಿ ವ್ಯವಸ್ಥೆ ಮಾಡಿದರೇ, ಅದಕ್ಕೆ ಪೂರಕವಾದ ಬಂದೋಬಸ್ತ್ ಕೂಡಾ ಮಾಡಲು ಪೊಲೀಸರು ಸನ್ನದ್ಧರಾಗಿದ್ದಾರೆ. ಅದೇ ಕಾರಣಕ್ಕೆ ತಾವೇ ಖುದ್ದಾಗಿ ಪ್ರಮುಖ ಸ್ಥಳಗಳಿಗೆ ಭೇಟಿ ನೀಡುತ್ತಿದ್ದಾರೆ.
ಪೊಲೀಸ್ ಕಮೀಷನರ್ ಲಾಬುರಾಮ್ ಅವರು ತಾವೇ ಖುದ್ದಾಗಿ ಭೇಟಿ ನೀಡುತ್ತಿರುವುದರಿಂದ ಇನ್ನುಳಿದ ಅಧಿಕಾರಿಗಳು ಆ್ಯಕ್ಟಿವ್ ಆಗಿ ಫೀಲ್ಡನಲ್ಲಿಯೇ ಇದ್ದು ಕರ್ತವ್ಯ ನಿರ್ವಹಣೆ ಮಾಡುತ್ತಿರುವುದು ಕಂಡು ಬರುತ್ತಿದೆ.