ಪೊಲೀಸ್ ಕಮೀಷನರಗೆ ಒಂದೇ ವಾರದ ಟೈಮ್: ಗೃಹ ಸಚಿವರೇ ಮಾನಿಟರ್ ಮಾಡ್ತಾರಂತೆ..!
ಹುಬ್ಬಳ್ಳಿ: ಅವಳಿನಗರದಲ್ಲಿ ಕೆಲವೇ ಕೆಲವು ಪೊಲೀಸ್ ಠಾಣೆಗಳಲ್ಲಿ ನಿರಾಂತಕವಾಗಿ ದೋ ನಂಬರ್ ದಂಧೆಗಳು ನಡೆಯುತ್ತಿವೆ. ಅಪರಾಧ ಪ್ರಕರಣಗಳು ಹೆಚ್ಚಿಗೆ ಆಗುತ್ತಿವೆ. ಇವುಗಳನ್ನ ತಡೆಗಟ್ಟಲು ಒಂದೇ ಒಂದು ವಾರದ ಸಮಯವನ್ನ ನೀಡಿರುವುದಾಗಿ ಗೃಹ ಸಚಿವರು ಹೇಳಿದ್ದು, ಅವಳಿನಗರದ ಪೊಲೀಸ್ ಆಯುಕ್ತರಿಗೆ ಬಿಸಿ ಮುಟ್ಟಿಸಿದೆ.
ಹುಬ್ಬಳ್ಳಿಯ ತಮ್ಮ ನಿವಾಸದಲ್ಲಿ ಮಾತನಾಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕಚೇರಿಯಲ್ಲಿ ಕೂತು ಕಾಗದದ ಮೇಲೆ ಡೈರೆಕ್ಷನ್ ಕೊಡುವ ಹಾಗಿಲ್ಲ. ಹೊರಗೆ ಬಂದು ಫೀಲ್ಡನಲ್ಲಿ ಕೆಲಸ ಮಾಡಬೇಕೆಂದು ಹೇಳಿದ್ದೇನೆ. ಒಂದು ವಾರದಲ್ಲಿ ವ್ಯವಸ್ಥೆ ಬದಲಾಗಬೇಕೆಂದು ಸೂಚನೆ ನೀಡಿದ್ದೇನೆ ಎನ್ನುವ ಮೂಲಕ ಗೃಹ ಸಚಿವರು ತವರೂರಿನ ಬಗ್ಗೆ ಕಾಳಜಿ ತೆಗೆದುಕೊಂಡಿದ್ದಾರೆ.
ಹುಬ್ಬಳ್ಳಿಗೆ ಬೇರೆ ಬೇರೆ ರಾಜ್ಯಗಳಿಂದ ಬಂದು ಕೊಲೆ ಮಾಡಿ ಹೋಗುತ್ತಿದ್ದಾರೆ. ಇದು ಕೂಡ ನಿಲ್ಲಬೇಕೆಂದು ಹೇಳಿದ್ದೇನೆ. ಇನ್ನೂ ಮುಂದೆ ನಾನೇ ಮಾನಿಟರ್ ಮಾಡುತ್ತೇನೆ. ಹೇಗಾದರೂ ಮಾಡಿ ಸರಿ ಮಾಡುತ್ತೇನೆ ಎನ್ನುವ ಬಸವರಾಜ ಬೊಮ್ಮಾಯಿಯವರ ಕಾಳಜಿಯನ್ನ ಪೊಲೀಸ್ ಆಯುಕ್ತರು ಅರ್ಥ ಮಾಡಿಕೊಳ್ಳಬೇಕಿದೆ.
ಕೆಲವೇ ಕೆಲವು ಠಾಣೆಗಳಲ್ಲಿ ಕ್ರೈಂಗಳು ನಡೆಯುತ್ತಿರುವ ಬಗ್ಗೆ ಮಾಹಿತಿ ಪಡೆದಿರುವ ಗೃಹ ಸಚಿವರು, ಅಲ್ಲಿರುವ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಏನೂ ಮಾಡುತ್ತಿದ್ದಾರೆಂಬ ಮಾಹಿತಿಯನ್ನೂ ಕಲೆ ಹಾಕಿದ್ದಾರೆನ್ನಲಾಗಿದೆ. ಹೇಗಾದರೂ ಆಗಿ, ಅವಳಿನಗರ ಭಯಮುಕ್ತವಾದ್ರೇ ಸಾಕು ಅನ್ನೋದು ಪ್ರಜ್ಞಾವಂತರ ಬಯಕೆ.