ಬೆಳ್ಳಂಬೆಳಿಗ್ಗೆ ಫೀಲ್ಡಿಗಿಳಿದ ಪೊಲೀಸ್ ಕಮೀಷನರ್ ಲಾಬೂರಾಮ
1 min readಹುಬ್ಬಳ್ಳಿ: ಅವಳಿನಗರದಲ್ಲಿ ಯಾವುದೇ ರೀತಿಯ ತೊಂದರೆಗಳು ನಡೆಯಬಾರದೆಂದು ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರ್ ಲಾಬೂರಾಮ್ ಬೆಳ್ಳಂಬೆಳಿಗ್ಗೆ ಫೀಲ್ಡಿಗೆ ಇಳಿದಿದ್ದು, ಬಹಳ ವರ್ಷಗಳ ನಂತರ ಓರ್ವ ಕಮೀಷನರ್ ಹೊರಗೆ ಬಂದು ಕರ್ತವ್ಯ ನಿಭಾಯಿಸುವುದನ್ನ ನೋಡುವಂತಾಯಿತು.
ಸಾರಿಗೆ ಸಂಸ್ಥೆಯ ಚಾಲಕ, ನಿರ್ವಾಹಕ ಮುಷ್ಕರ ಕಾವು ಹೆಚ್ಚಾಗುತ್ತಿರುವ ಬೆನ್ನಲ್ಲೇ ವಾಣಿಜ್ಯನಗರಿಯ ಹಲವು ಪ್ರದೇಶಗಳಲ್ಲಿ ಸಂಚರಿಸಿದ ಪೊಲೀಸ್ ಕಮೀಷನರ್, ಸೂಕ್ತ ಬಂದೋಬಸ್ತ ನಿಯೋಜನೆಯನ್ನ ಪರಿಶೀಲನೆ ಮಾಡಿದ್ರು.
ಈ ಸಮಯದಲ್ಲಿ ಮಾತನಾಡಿದ ಪೊಲೀಸ್ ಕಮೀಷನರ್ ಲಾಬೂರಾಮ, ಬಸ್ ಸಂಚಾರ ಆರಂಭಗೊಂಡರೇ ಅವರಿಗೆ ರಕ್ಷಣೆ ಕೊಡುತ್ತೇವೆ. ಬಸ್ ನಿಲ್ದಾಣದ ಮುಂದೆ ಬಂದೋಬಸ್ತ್ ನಿಯೋಜನೆ ಮಾಡಲಾಗಿದೆ. ತಾವಾಗಲೇ ಮುಂದೆ ಬಂದು ಬಸ್ ಸಂಚಾರ ಆರಂಭಿಸಿದರೇ, ಅವರಿಗೆ ರಕ್ಷಣೆ ಕೊಡಲಾಗುವುದು ಎಂದರು.
ಬಸ್ ಬಂದ್ ಮಾಡುವ ಪ್ರಯತ್ನ ಮಾಡಿದರೇ, ಅಂತವರ ವಿರುದ್ಧ ಸೂಕ್ತವಾದ ಕ್ರಮವನ್ನ ಜರುಗಿಸಲಾಗುವುದೆಂದು ಕಮೀಷನರ್ ಲಾಬೂರಾಮ್ ಎಚ್ಚರಿಕೆ ನೀಡಿದ್ರು.