ಪೊಲೀಸ್ ಆಯುಕ್ತರೇ ಆಫೀಸಿಂದ ಹೊರಗೆ ಬನ್ನಿ: ಕ್ರೈಂ ನಡೆದ್ರೇ ನೀವೇ ಜವಾಬ್ದಾರಿ: ಗೃಹ ಸಚಿವರ ಖಡಕ್ ಎಚ್ಚರಿಕೆ
1 min readಹುಬ್ಬಳ್ಳಿ: ಅವಳಿನಗರದಲ್ಲಿ ನಿರಂತರವಾಗಿ ಕ್ರೈಂ ನಡೆಯುತ್ತಿದ್ದರೂ ಕಚೇರಿಯಲ್ಲಿ ಕೂತು ಆದೇಶಗಳನ್ನ ಕೊಡುತ್ತ ಕೂಡುವ ಹಾಗಿಲ್ಲ. ಮೊದಲು ಹೊರಗೆ ಬಂದು ನೋಡಿಕೊಳ್ಳಿ. ಇನ್ನೂ ಮುಂದೆ ಏನೇ ಅಪರಾಧ ನಡೆದರೂ ನೀವೇ ಜವಾಬ್ದಾರರು ಎಂದು ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಆರ್.ದಿಲೀಪ್ ಅವರಿಗೆ ಖಡಕ್ ಎಚ್ಚರಿಕೆ ನೀಡಿರುವುದನ್ನ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿಕೊಂಡರು.
ಹುಬ್ಬಳ್ಳಿಯಲ್ಲಿಂದು ಮಾತನಾಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಎರಡ್ಮೂರು ಠಾಣೆಗಳ ವ್ಯಾಪ್ತಿಯಲ್ಲಿ ಅಪರಾಧಗಳು ನಡೆಯುತ್ತಿವೆ. ಈ ಬಗ್ಗೆ ಈಗಾಗಲೇ ಡಿಸಿಪಿ, ಕಮೀಷನರ್ ಗೆ ಮಾತನಾಡಿದ್ದೇನೆ. ಕೇವಲ ಕಚೇರಿಯಲ್ಲಿ ಕೂತರೇ ನಡೆಯುವುದಿಲ್ಲ. ಹೊರಗೆ ಬಂದು ಪರಿಸ್ಥಿತಿಯನ್ನ ಅವಲೋಕನ ಮಾಡಿ ಎಂದು ಹೇಳಿದ್ದೇನೆ ಎಂದರು.
ಅವಳಿನಗರದಲ್ಲಿ ಯಾವುದೇ ಅಪರಾಧ ಪ್ರಕರಣಗಳು ನಡೆದರೂ ಅವರೇ ಜವಾಬ್ದಾರಿ ಎಂಬುದನ್ನ ಸ್ಪಷ್ಟವಾಗಿ ಹೇಳಿದ್ದೇನೆ. ಕ್ರೈಂ ಟೀಂ ರಚನೆ ಮಾಡುವಂತೆಯೂ ಹೇಳಿದ್ದೇನೆ ಎಂದರು.
ಪೊಲೀಸ್ ಆಯುಕ್ತ ಆರ್.ದಿಲೀಪ ಕಾರ್ಯವೈಖರಿಯ ಬಗ್ಗೆ ಸಚಿವರಿಗೆ ಕೊನೆಗೂ ಗೊತ್ತಾಗಿದ್ದೂ, ಒಂದು ವಾರದಲ್ಲಿ ಬದಲಾವಣೆ ಬರಬಹುದೆಂಬ ಆಶಾಭಾವನೆಯನ್ನ ಗೃಹ ಸಚಿವರು ವ್ಯಕ್ತಪಡಿಸಿದ್ದು, ಅದಕ್ಕಾಗಿ ವಾರ ಕಾಯಬೇಕಷ್ಟೇ..