ಚಪಾತಿ “ಲಟ್ಟಿಸಿದ” ಪೊಲೀಸ್ ಕಮೀಷನರ್ ಎನ್.ಶಶಿಕುಮಾರ: ವೀಡಿಯೋ ವೈರಲ್…!!!

ಬಿಸಿ ಬಿಸಿ ಚಪಾತಿ ಮಾಡಿದ ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್: ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್
ಹುಬ್ಬಳ್ಳಿ: ಅವಳಿ ನಗರದ ಪೊಲೀಸ್ ಕಮೀಷನರ್ ಆದ ನಂತರ ಎನ್.ಶಶಿಕುಮಾರ್ ಅವರು ಕಾನೂನು ಸುವ್ಯವಸ್ಥೆ ಹಾಗೂ ಸಾರ್ವಜನಿಕರಿಗೆ ಪೊಲೀಸ್ ಇಲಾಖೆ ಹತ್ತಿರ ಆಗುವ ನಿಟ್ಟಿನಲ್ಲಿ ಸಾಕಷ್ಟು ಕಾರ್ಯಗಳನ್ನು ಮಾಡಿ ಜನ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
Viral Video….
ಈ ನಡುವೆ ಡ್ಯೂಟಿ ಜಂಜಾಟದಿಂದ ದೂರ ಸರಿದ ಕಮೀಷನರ್ ಶಶಿಕುಮಾರ್ ಅವರು ಮೊನ್ನೆ ಮೊನ್ನೆ ಪೊಲೀಸ್ ಕ್ರೀಡಾಕೂಟ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸತತ 1 ಗಂಟೆಯ ವರೆಗೂ ಹಾಡನ್ನು ಹಾಡಿ ರಿಲ್ಯಾಕ್ಸ್ ಮೂಡಿಗೆ ತಾವು ಜಾರಿ ಸಿಬ್ಬಂದಿಗಳನ್ನು ಖುಷಿಯ ಕಡಲಲ್ಲಿ ತೇಲಿಸಿದ್ದರು.
ಇದರ ನಡುವೆಯೇ ಸ್ವತಃ ಕಮಿಷನರ್ ಎನ್. ಶಶಿಕುಮಾರ್ ಅವರು ಬಿಸಿ ಬಿಸಿ ಚಪಾತಿ ಮಾಡುವುದರ ಮೂಲಕ ನಾನು ಸಿಂಗಿಂಗ್ ಗೂ ಸೈ, ಕುಕಿಂಗ್ ಗೂ ಸೈ ಎಂದು ಚಪಾತಿ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಮಸ್ತ್ ವೈರಲ್ ಆಗುತ್ತಿದೆ.