ಕುಂತ ಬಗೀಹರಿಸ್ಕೋಳ್ಳಿ-ಇಲ್ಲಂದ್ರ… ಸಚಿವ ಜಗದೀಶ ಶೆಟ್ಟರ

ಹುಬ್ಬಳ್ಳಿ: ಇಂದು ಬೆಳಿಗ್ಗೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರಗೆ ಮಾತಾಡಿದ್ದೇನೆ. ನೀವೇ ಕೂತು ಬಗೆಹರಿಸಿಕೊಳ್ಳಿ ಎಂದು ಹೇಳಿದ್ದೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಹೇಳಿದರು.
ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಅಧಿಕಾರಿಗಳ ಒಳಜಗಳ ಹೊರಗೆ ಬಂದ ನಂತರ, ಸರಕಾರದಲ್ಲಿರುವ ಮಂತ್ರಿಗಳಿಗೂ ಬೇಸರವಾಗಿದ್ದು, ಇದನ್ನ ಬೇಗನೇ ಬಗೆಹರಿಸಿಕೊಳ್ಳಿ ಇಲ್ಲದಿದ್ದರೇ ನಾವೂ ಮಧ್ಯಸ್ತಿಕೆ ವಹಿಸಿಕೊಳ್ಳಬೇಕಾಗತ್ತೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹೇಳುವ ಸ್ಥಿತಿ ಬಂದೊದಗಿದೆ.
ಪರಸ್ಪರ ವಿಶ್ವಸ ತೆಗೆದುಕೊಂಡು ಮಾತನಾಡಿ ಎಂದಿದ್ದೇನೆ. ಗೃಹ ಸಚಿವರಿಗೂ ಹೇಳಿದ್ದೇನೆ. ಈ ಬಗ್ಗೆ ವಾರ್ನಿಂಗ್ ಮಾಡಿದ್ದೇನೆ. ಅದರ ಬಗ್ಗೆ ಕ್ರಮ ತೆಗೆದುಕೊಳ್ಳಲು ಮುಂದಾಗುತ್ತೇವೆ ಎಂದರು.
ಹಿರಿಯ ಅಧಿಕಾರಿಗಳ ಜಗಳದಿಂದ ಇನ್ನುಳಿದ ಅಧಿಕಾರಿಗಳಲ್ಲೂ ಕರ್ತವ್ಯ ನಿರ್ವಹಣೆಗೆ ತೊಂದರೆಯಾಗುತ್ತಿರುವ ಬಗ್ಗೆಯೂ ಜಗದೀಶ ಶೆಟ್ಟರ ಕೂಡಾ ಬೇಸರವ್ಯಕ್ತಪಡಿಸಿದರು.