ಡಿಸಿಪಿ ಪಿ.ಕೃಷ್ಣಕಾಂತ ಮತ್ತೊಂದು ಪತ್ರ ಬಹಿರಂಗ: ಟಾರ್ಗೆಟ್ ಮಾಡ್ತಿರೋದು ಯಾರೂ.. ಯಾರನ್ನ..

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಕಮೀಷನರ್ ಹಾಗೂ ಕಾನೂನು-ಸುವ್ಯವಸ್ಥೆ ಡಿಸಿಪಿ ನಡುವಿನ ಪತ್ರ ಸಮರ ಮುಂದುವರೆದಿದ್ದು, ಉದ್ದೇಶಪೂರ್ವಕವಾಗಿ ತಮ್ಮನ್ನ ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಡಿಸಿಪಿ ಪಿ.ಕೃಷ್ಣಕಾಂತ ಹೇಳಿಕೊಂಡಿದ್ದಾರೆನ್ನಲಾದ ಪತ್ರವೊಂದು ಹೊರಬಿದ್ದಿದೆ.
ಪೊಲೀಸ್ ಆಯುಕ್ತ ಆರ್.ದಿಲೀಪ್ ಅವರಿಗೆ ಅಕ್ಟೋಬರ್ ಮೂರನೇಯ ತಾರೀಖಿನಂದು ಪೋನ್ ಮಾಡಿ, ಅಪರಾಧ ಮತ್ತು ಸಂಚಾರಿ ವಿಭಾಗದ ಡಿಸಿಪಿ ಬಗ್ಗೆ ಕಾನೂನು-ಸುವ್ಯವಸ್ಥೆ ಡಿಸಿಪಿ ಪಿ.ಕೃಷ್ಣಕಾಂತ ಲಂಚ ತೆಗೆದುಕೊಳ್ಳುವ ಬಗ್ಗೆ ಹೇಳಿದ್ದರು. ಇದಕ್ಕೆ ಪೂರಕವಾಗಿ ಮೆಮೋ ಕೊಟ್ಟಿದ್ದ ಆಯುಕ್ತ ಆರ್.ದಿಲೀಪ್, ವರದಿಯನ್ನ ಮಾಡಿಕೊಡಿ ಎಂದು ಡಿಸಿಪಿ ಕೃಷ್ಣಕಾಂತರಿಗೆ ಹೇಳಿದ್ದರು.
ಇದಾದ ನಂತರ ಪರಿಸ್ಥಿತಿ ಬದಲಾಗಿ ಡಿಸಿಪಿ ಪಿ.ಕೃಷ್ಣಕಾಂತ, ಕಂಟ್ರೋಲ್ ರೂಮ್ ಮೂಲಕ ಕಮೀಷನರಗೆ ಪತ್ರ ಬರೆದು ಅದೇ ಕಾಫಿಯನ್ನ ಪೊಲೀಸ್ ಮಹಾನಿರ್ದೇಶಕರಿಗೂ ಕಳಿಸಿದ್ದರು. ಅದರಲ್ಲಿ ಪೊಲೀಸ್ ಆಯುಕ್ತರು ತಮ್ಮನ್ನ ಭೇಟಿಯಾಗಲು ಅವಕಾಶ ನೀಡುತ್ತಿಲ್ಲವೆಂದು ಹೇಳಿಕೊಂಡಿದ್ದರು.
ಈಗ ಪೊಲೀಸ್ ಆಯುಕ್ತರ ಮೆಮೋಗೆ ಉತ್ತರ ನೀಡಿರುವ ಪಿ.ಕೃಷ್ಣಕಾಂತ ತಮ್ಮನ್ನ ಟಾರ್ಗೆಟ್ ಮಾಡಲಾಗುತ್ತಿದೆ ಎಂದು ವಿವರವಾಗಿ ಹೇಳಿಕೊಂಡಿದ್ದಾರೆ. ಆ ಪತ್ರವೂ ಇದೀಗ ಬಹಿರಂಗವಾಗಿದ್ದು, ಪೊಲೀಸ್ ಕಮೀಷನರ್ ಕಚೇರಿಯಲ್ಲಿ ಯಾವುದೂ ಸರಿಯಿಲ್ಲ ಎನ್ನುವಂತಾಗಿದೆ.