Posts Slider

Karnataka Voice

Latest Kannada News

CP-DCP ವಿವಾದಕ್ಕೆ ಇತೀಶ್ರೀ ಹಾಡ್ತೇನಿ: ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಖಡಕ ಉತ್ತರ

Spread the love

ಹುಬ್ಬಳ್ಳಿ: ಅವಳಿನಗರದಲ್ಲಿ ಪೊಲೀಸ್ ಆಯುಕ್ತ ಆರ್.ದಿಲೀಪ ಹಾಗೂ ಡಿಸಿಪಿ ಪಿ.ಕೃಷ್ಣಕಾಂತರ ಒಳಜಗಳದ ಬಗ್ಗೆ ಗೊತ್ತಾಗಿದೆ. ಇದಕ್ಕೊಂದು ಇತೀಶ್ರೀ ಹಾಡುತ್ತೇನೆಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಹೇಳಿದರು.

ಜಗದೀಶ ಶೆಟ್ಟರ ಹೇಳಿದ್ದೇನು ಕೇಳಿ..

ಇಂದು ಬೆಳಿಗ್ಗೆ ಡಿಸಿಪಿ- ಕಮೀಷನರ್ ಒಳಜಗಳ ಹೊರ ಬೀಳುತ್ತಿದ್ದಂತೆ ಪ್ರತಿಕ್ರಿಯೆ ನೀಡಿದ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ, ಈ ಥರದ ವ್ಯವಸ್ಥೆ ಆಡಳಿತದ ಮೇಲೆ ಪರಿಣಾಮ ಬೀಳತ್ತೆ. ಹಾಗಾಗಿಯೇ ಪ್ರತ್ಯೇಕವಾಗಿ ಪೊಲೀಸ್ ಕಮೀಷನರ್ ಮತ್ತು ಡಿಸಿಪಿ ಜೊತೆ ಮಾತಾಡುತ್ತೇನೆ. ಈ ವಿಷಯದ ಬಗ್ಗೆ ಗೃಹ ಸಚಿವರೊಂದಿಗೆ ಮಾತಾಡಿ ಇತೀಶ್ರೀ ಹಾಡುತ್ತೇನೆ ಅಂದರು.
ಇವರಿಬ್ಬರ ವಿಷಯದ ಬಗ್ಗೆ ಹಲವು ವಿಷಯಗಳು ಗೊತ್ತಾಗಿವೆ. ಅದೇಲ್ಲವನ್ನೂ ವಿಚಾರಿಸುತ್ತೇನೆ. ಹೀಗೆ ನಡೆದುಕೊಳ್ಳುವುದರಿಂದ ಆಡಳಿತದ ಮೇಲೆ ಪರಿಣಾಮ ಬೀಳುತ್ತದೆ ಎಂದು ಜಗದೀಶ ಶೆಟ್ಟರ ಹೇಳಿದರು.
ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರ್ ಹಾಗೂ ಡಿಸಿಪಿ ನಡುವಿನ ಪ್ರಕರಣ ಇಲಾಖೆಯಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಹಿರಿಯ ಅಧಿಕಾರಿಗಳೇ ಹೀಗಾಗಿರುವುದರಿಂದಲೇ ಇಲಾಖೆಯಲ್ಲಿ ಗೊಂದಲಗಳು ಸೃಷ್ಠಿಯಾಗಿದೆ.


Spread the love

Leave a Reply

Your email address will not be published. Required fields are marked *

You may have missed