ನಾಳೆ ಬಂದ್- ಪೊಲೀಸ್ ಕಮೀಷನರ್ ಹೇಳಿದ್ದೇನು.. ಎಕ್ಸಕ್ಲೂಸಿವ್ ಟಾಕ್..

ಹುಬ್ಬಳ್ಳಿ: ರಾಜ್ಯದಲ್ಲಿ ನಾಳೆ ಕರ್ನಾಟಕ ಬಂದ್ ಕರೆ ನೀಡಿರುವ ಬೆನ್ನಲ್ಲೇ ಹುಬ್ಬಳ್ಳಿ-ಧಾರವಾಡದಲ್ಲೂ ಬಿಗಿ ಪೊಲೀಸ್ ಕಾವಲು ಹಾಕಲಾಗುತ್ತಿದ್ದು, ಬೆಳಿಗ್ಗೆ ಆರು ಗಂಟೆಯಿಂದಲೇ ಪೊಲೀಸರು ಬಂದೋಬಸ್ತ್ ನಿರ್ವಹಿಸಲಿದ್ದಾರೆಂದು ಪೊಲೀಸ್ ಕಮೀಷನರ್ ಲಾಬುರಾಮ್ ಹೇಳಿದರು.
ಪೊಲೀಸ್ ಕಮೀಷನರ್ ಸಂಪೂರ್ಣ ಹೇಳಿಕೆ..
ಅಧಿಕಾರಿಗಳ ಜೊತೆಗೆ ಸುಮಾರು ಹೊತ್ತು ಸಭೆ ನಡೆಸಿದ ನಂತರ ಮಾತನಾಡಿದ ಪೊಲೀಸ್ ಕಮೀಷನರ್ ಲಾಬುರಾಮ ಅವರು, 12 ಕೆಎಸ್ ಆರ್ ಪಿ, 3 ಡಿಎಆರ್ ಪ್ಲಟೂನಗಳನ್ನ ನಿಯೋಜನೆ ಮಾಡಲಾಗಿದೆ. ಅಷ್ಟೇ ಅಲ್ಲ, ಅವಳಿನಗರದ ಬಹುತೇಕ ಅಧಿಕಾರಿಗಳು ಕರ್ತವ್ಯ ನಿರ್ವಹಿಸಲಿದ್ದಾರೆಂದು ಹೇಳಿದರು.
ಅನಾರೋಗ್ಯದಿಂದ ಬಳಲುತ್ತಿದ್ದ ಪೊಲೀಸ್ ಕಮೀಷನರ್ ಆರೋಗ್ಯವಾಗಿ ಬಂದು, ಸಭೆಯನ್ನ ನಡೆಸಿ, ಅವಳಿನಗರದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಕಾವಲು ನಿಯೋಜನೆ ಮಾಡಲಾಗಿದೆ.