ಬೆಂಗಳೂರಲ್ಲಿ ಕಾಂಗ್ರೆಸ್ ರಣಕಹಳೆ: ಧಾರವಾಡದಿಂದ ಹೋದವರ ಹೋರಾಟ ಹೇಗಿತ್ತು ಗೊತ್ತಾ.. ವೀಡಿಯೋ ಸಮೇತ…

ಬೆಂಗಳೂರು: ನವದೆಹಲಿಯಲ್ಲಿ ಕಳೆದ ಎರಡು ತಿಂಗಳಿಂದ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಕಾಯ್ದೆ ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ನೀಡಿ, ನಗರದಲ್ಲಿಂದು ನಡೆದ ಹೋರಾಟ ಸಂಪೂರ್ಣವಾಗಿ ಯಶಸ್ವಿಗೊಂಡಿದ್ದು, ಡಿ.ಕೆ.ಶಿವುಕುಮಾರ ಕೆಪಿಸಿಸಿ ಅಧ್ಯಕ್ಷರಾದ ನಂತರ ನಡೆದ ಮೊದಲ ಬೃಹತ್ ಹೋರಾಟವಾಗಿದೆ.
ಹೋರಾಟದಲ್ಲಿ ಭಾಗಿಯಾದವರ ವೀಡಿಯೋ ಇಲ್ಲಿದೆ ನೋಡಿ..
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವುಕುಮಾರ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದಲ್ಲಿ ನಡೆದ ಹೋರಾಟದಲ್ಲಿ ಧಾರವಾಡ ಜಿಲ್ಲೆಯಿಂದಲೂ ಸಾವಿರಾರೂ ಕಾರ್ಯಕರ್ತರು ಆಗಮಿಸಿ, ಬೆಂಬಲ ನೀಡಿದ್ದರು.
ಕಲಘಟಗಿ ತಾಲೂಕಿನಿಂದ ಮಾಜಿ ಸಚಿವ ಸಂತೋಷ ಲಾಡ ಬೆಂಬಲಿಗರು ಸಾರಿಗೆ ಸಂಸ್ಥೆಯ ಬಸ್ ಮೂಲಕ ಆಗಮಿಸಿ ಹೋರಾಟದಲ್ಲಿ ಭಾಗಿಯಾಗಿದ್ದರು. ನವಲಗುಂದ ಕ್ಷೇತ್ರದ ಯುವ ಮುಖಂಡ ಹಾಗೂ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿನೋದ ಅಸೂಟಿ ತಮ್ಮ ಬೆಂಬಲಿಗರೊಂದಿಗೆ ಆಗಮಿಸಿದ್ದರು.
ಶಾಸಕ ಪ್ರಸಾದ ಅಬ್ಬಯ್ಯ, ಜಿಲ್ಲಾಧ್ಯಕ್ಷ ಅನಿಲಕುಮಾರ ಪಾಟೀಲ, ರಾಬರ್ಟ್ ದದ್ಧಾಪುರಿ, ಅಲ್ತಾಪ ಹಳ್ಳೂರ, ಸತೀಶ ಮೆಹರವಾಡೆ, ನಾಗರಾಜ ಗೌರಿ, ಪ್ರಶಾಂತ ಕೇಕರೆ, ದೇವಕಿ ಸೇರಿದಂತೆ ಹಲವು ಮುಖಂಡರು ಭಾಗಿಯಾಗಿದ್ದರು.