ಯಡಿಯೂರಪ್ಪನವರ “ಬೀಗ” ಚಿಕ್ಕನಗೌಡರು ಕಾಂಗ್ರೆಸ್ “ಪೋಯಿಂದಿ”…

ಬೆಂಗಳೂರು: ಭಾರತೀಯ ಜನತಾ ಪಕ್ಷದ ಮಾಜಿ ಶಾಸಕ ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಸಂಬಂಧಿಯಾಗಿರುವ ಎಸ್.ಐ.ಚಿಕ್ಕನಗೌಡರ ಇಂದು ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಗೊಂಡರು.
ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಸಮ್ಮುಖದಲ್ಲಿ ಪಕ್ಷದ ಸೇರ್ಪಡೆಯನ್ನ ಖಚಿತಪಡಿಸಿದರು. ಕಾವೇರಿಯ ನಿವಾಸದಲ್ಲಿ ಬಹುದಿನಗಳ ವದಂತಿಗೆ ಖಚಿತತೆಯನ್ನ ತೋರಿಸಿದರು.
ಮಾಜಿ ಸಿಎಂ ಜಗದೀಶ ಶೆಟ್ಟರ್, ಕುಂದಗೋಳ ಕ್ಷೇತ್ರದ ಕಾಂಗ್ರೆಸ್ ಮುಖಂಡ ಶಿವಾನಂದ ಬೆಂತೂರ ಈ ಸಮಯದಲ್ಲಿ ಉಪಸ್ಥಿತರಿದ್ದರು.