ರಾಹುಲ ಗಾಂಧಿ ಜೊತೆ ನಾಲ್ಕೇಜ್ಜೆ ಹಾಕಿದ “ನವಲಗುಂದ ಕ್ಷೇತ್ರದ ಹುರಿಯಾಳು ವಿನೋದ ಅಸೂಟಿ”…

ಬೆಂಗಳೂರು: ಕನ್ಯಾಕುಮಾರಿಯಿಂದ ಆರಂಭಗೊಂಡಿರುವ ಭಾರತ ಜೋಡೊ ಯಾತ್ರೆಯು ಕರ್ನಾಟಕದಲ್ಲಿ ನಡೆಯುತ್ತಿದ್ದು, ಧಾರವಾಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರು ಕೂಡಾ ಯಾತ್ರೆಯಲ್ಲಿ ಭಾಗವಹಿಸಿದ್ದಾರೆ.

ಧಾರವಾಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರು ಆಗಿರುವ ನವಲಗುಂದ ಕ್ಷೇತ್ರದ ಕಾಂಗ್ರೆಸ್ ಹುರಿಯಾಳೆಂದು ಗುರುತಿಸ್ಪಲ್ಪಟ್ಟಿರುವ ವಿನೋದ ಅಸೂಟಿಯವರು, ರಾಹುಲ ಗಾಂಧಿಯವರೊಂದಿಗೆ ಕೆಲಕಾಲ ಪಾದಯಾತ್ರೆಯಲ್ಲಿ ಜೊತೆಯಾಗಿ ನಡೆದರು.
ಈ ಸಮಯದಲ್ಲಿ ಯುವ ಕಾಂಗ್ರೆಸ್ ಬಗ್ಗೆ ಮಾಹಿತಿಯನ್ನ ನೀಡಿರುವ ವಿನೋದ ಅವರಿಗೆ, ಯುವ ಕಾಂಗ್ರೆಸ್ ಕೋಟಾದಲ್ಲಿ ನವಲಗುಂದ ಕ್ಷೇತ್ರಕ್ಕೆ ಟಿಕೆಟ್ ನೀಡುವುದು ನಿಶ್ಚಿತ ಎಂದು ಹೇಳಲಾಗಿದೆ.
ನವಲಗುಂದ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನ ಉಳಿಸಿ ಬೆಳೆಸಿರುವ ವಿನೋದ ಅಸೂಟಿಯವರಿಗೆ ಭಾರತ ಜೋಡೊ ಯಾತ್ರೆ ಮತ್ತಷ್ಟು ಹುರುಪು ತುಂಬಿದೆ ಎನ್ನುವುದು ಸತ್ಯ.