“ಸಲೀಂ ಅಹ್ಮದ” ಪರವಾಗಿ ‘ವಿನಯ ಕುಲಕರ್ಣಿ’ ನೇತೃತ್ವದಲ್ಲಿ ಚುನಾವಣೆ ಪ್ರಚಾರ…

ಧಾರವಾಡ: ಸ್ಥಳೀಯ ಸಂಸ್ಥೆಗಳ ವಿಧಾನಪರಿಷತ್ ಚುನಾವಣೆಯ ಅಂಗವಾಗಿ ಮಾಜಿ ಸಚಿವ ವಿನಯ ಕುಲಕರ್ಣಿಯವರು, ಸವದತ್ತಿಯಲ್ಲಿ ಡಿಸೆಂಬರ್ ಪ್ರಚಾರವನ್ನ ನಡೆಸಲಿದ್ದಾರೆ.

ಡಿಸೆಂಬರ್ 5ರಂದು ಸವದತ್ತಿಯ ಕರಿಕಟ್ಟಿ ರಸ್ತೆಯಲ್ಲಿರುವ ನಿಕ್ಕಂ ಕಲ್ಯಾಣ ಮಂಟಪದಲ್ಲಿ ಸಭೆಯನ್ನ ಆಯೋಜನೆ ಮಾಡಲಾಗಿದ್ದು, ಧಾರವಾಡ ಗ್ರಾಮೀಣ ಭಾಗದ ಚುನಾಯಿತ ಸದಸ್ಯರು ಭಾಗವಹಿಸುವಂತೆ ಕೋರಲಾಗಿದೆ.
ಧಾರವಾಡ, ಹಾವೇರಿ ಮತ್ತು ಗದಗ ವ್ಯಾಪ್ತಿಯ ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸಲೀಂ ಅಹ್ಮದರು ಕಣದಲ್ಲಿದ್ದಾರೆ.
ಧಾರವಾಡ ಗ್ರಾಮೀಣ ಭಾಗದ ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಮಹಾನಗರ ಪಾಲಿಕೆ ಸದಸ್ಯರು ಸೇರಿದಂತೆ ಹಲವರು ಭಾಗವಹಿಸುವಂತೆ ಮನವಿ ಮಾಡಿಕೊಳ್ಳಲಾಗಿದೆ.