ಟಗರಗುಂಟಿ, ಘಾಟಗೆ, ಮಂಜು ಕದಂ, ಸುಧಾ ಸೇರಿದಂತೆ 34 ಪ್ರಮುಖರನ್ನ ಅಮಾನತ್ತು ಮಾಡಲು ಕೆಪಿಸಿಸಿಗೆ ಕೋರಿಕೆ…!
1 min readಹುಬ್ಬಳ್ಳಿ: ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪಕ್ಷದ ಟಿಕೆಟ್ ಆಕಾಂಕ್ಷಿಗಳಾಗಿದ್ದ ಹಲವರನ್ನ ಕಡೆಗಣಿಸಿದ ಹಿನ್ನೆಲೆಯಲ್ಲಿ ಪಕ್ಷೇತರ ಅಭ್ಯರ್ಥಿಗಳಾಗಿ ಅಖಾಡಾದಲ್ಲಿ ಧುಮಕಿರುವ 34 ಪ್ರಮುಖರನ್ನ ಪಕ್ಷದಿಂದ 6 ವರ್ಷ ಅಮಾನತ್ತು ಮಾಡಲು, ಮಹಾನಗರ ಜಿಲ್ಲಾಧ್ಯಕ್ಷ ಕೆಪಿಸಿಸಿಗೆ ಪತ್ರವನ್ನ ಬರೆದಿದ್ದಾರೆ.
ಪ್ರಮುಖವಾಗಿ ಪಾಲಿಕೆಯ ಮಾಜಿ ಸದಸ್ಯರಾಗಿದ್ದ ಗಣೇಶ ಟಗರಗುಂಟಿಯವರಿಗೆ ಟಿಕೆಟ್ ಕೊಡದೇ, ಮಹಾನಗರ ಜಿಲ್ಲಾಧ್ಯಕ್ಷ ಅಲ್ತಾಪ ಹಳ್ಳೂರ, ತಮ್ಮ ಮಗನಿಗೆ ಟಿಕೆಟ್ ಪಡೆದುಕೊಂಡಿದ್ದರು. ಹೀಗಾಗಿ, ಅದೇ ವಾರ್ಡಿನಲ್ಲಿ ಗಣೇಶ ಟಗರಗುಂಟಿ ಹಲವು ಮುಸ್ಲಿಂ ನಾಯಕರ ಬೆಂಬದೊಂದಿಗೆ ಚುನಾವಣೆಗೆ ನಿಂತಿದ್ದಾರೆ.
ಇನ್ನುಳಿದಂತೆ ಧಾರವಾಡದ ಪ್ರಕಾಶ ಘಾಟಗೆ, ಮಂಜುನಾಥ ಕದಂ, ಯಾಸೀನ ಹಾವೇರಿಪೇಟೆಯವರ ಪತ್ನಿ, ಸುಧಾ ಮಣ್ಣೆಕುಂಟ್ಲಾ ಸೇರಿ ಒಟ್ಟು 34 ಬಂಡುಕೋರ ಅಭ್ಯರ್ಥಿಗಳನ್ನ ಅಮಾನತ್ತು ಮಾಡುವಂತೆ ಕೋರಲಾಗಿದೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವುಕುಮಾರ ಅವರಿಗೆ ಪ್ರತಿ ವಾರ್ಡಿನ ವಿವರವನ್ನ ಸಲ್ಲಿಸಿದ್ದು, ಅಲ್ಲಿಂದ ಅಂತಿಮ ತೀರ್ಮಾನ ಹೊರಗೆ ಬರಬೇಕಿದೆ.