35 ಜನಾ ಒಂದೇ ಮಾಸ್ಕ್: ಮಾಜಿ ಸಚಿವ ಸಂತೋಷ ಲಾಡ ಉಪಸ್ಥಿತಿಯಲ್ಲಿ ನಡೆದದ್ದೇನು..?

ಧಾರವಾಡ: ಮಾಜಿ ಸಚಿವ ಸಂತೋಷ ಲಾಡ ಇಂದು ಕಲಘಟಗಿ ಪಟ್ಟಣದಲ್ಲಿ ರೈತರ ಪರವಾಗಿ ಹೋರಾಟ ಮಾಡಿದರು. ಅದಾದ ನಂತರ ಪಕ್ಷದ ಕಾರ್ಯಕರ್ತರೊಂದಿಗೆ ಭಾವಚಿತ್ರ ತೆಗೆಸಿಕೊಳ್ಳುವಾಗ ಒಬ್ಬೇ ಒಬ್ಬರು ಪೂರ್ಣವಾಗಿ ಮಾಸ್ಕನ್ನ ಹಾಕಿಕೊಂಡು, ಗಮನ ಸೆಳೆದರು.
ಕೊರೋನಾ ಹಿನ್ನೆಲೆಯಲ್ಲಿ ದಿನೇ ದಿನೇ ಪಾಸಿಟಿವ್ ಆಗುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಕಲಘಟಗಿ ಕ್ಷೇತ್ರದಲ್ಲೂ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿವೆ. ಆದರೂ, ಇಂತಹದೊಂದು ಭಾವಚಿತ್ರ ಹೊರಗೆ ಬಂದಿರುವುದು ಸೋಜಿಗದ ವಿಷಯವಾಗಿದೆ.
ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಮಂಜುನಾಥ ಮುರಳ್ಳಿ, ಗುರು ಬೆಂಗೇರಿ, ಲಿಂಗರೆಡ್ಡಿ ನಡುವಿನಮನಿ, ಶಂಕರಗಿರಿ ಬಾವಾನವರ, ಸುಧೀರ ಬೋಳಾರ, ಬಾಳು ಖಾನಾಪುರ ಸೇರಿದಂತೆ ಹಲವು ಕಾರ್ಯಕರ್ತರು ಭಾವಚಿತ್ರ ತೆಗೆಸಿಕೊಳ್ಳುವಲ್ಲಿ ಮಗ್ನರಾಗಿದ್ದರೇ ಹೊರತು, ಮಾಸ್ಕ್ ಹಾಕಿಕೊಳ್ಳುವುದರಲ್ಲಿ ಅಲ್ಲ.
ಕೆಪಿಸಿಸಿ ಸದಸ್ಯ ಎಸ್.ಆರ್.ಪಾಟೀಲ ಒಬ್ಬರೇ ಮಾಸ್ಕ್ ಹಾಕಿಕೊಂಡಿದ್ದು, ಇನ್ನೋಬ್ಬರ ಭಾವಚಿತ್ರದಲ್ಲಿ ಎರಡನೇಯವರು, ಮಾಸ್ಕ್ ಹಾಕಿಕೊಳ್ಳಬೇಕಾ ಅಥವಾ ಬೇಡವೋ ಎನ್ನುವ ಥರದಲ್ಲಿ ಹಾಕಿಕೊಂಡಿದ್ದು ಕಂಡು ಬಂದಿದೆ.