ಪೊಲೀಸ್ ಕಮೀಷನರ್ ಅವರೇ, ಸೀಜ್ ಮಾಡಿದ ವಾಹನಗಳನ್ನ ಬಿಡಿ: ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ಮನವಿ…!
1 min readಹುಬ್ಬಳ್ಳಿ: ಲಾಕ್ ಡೌನ್ ಸಮಯದಲ್ಲಿ ಸೀಜ್ ಮಾಡಿದ ವಾಹನಗಳನ್ನ ಬೇಗನೇ ಬಿಡುಗಡೆ ಮಾಡುವಂತೆ ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಜತ ಉಳ್ಳಾಗಡ್ಡಿಮಠ, ಇಂದು ಎಸಿಪಿ ಅವರ ಮುಖಾಂತರ ಪೊಲೀಸ್ ಕಮೀಷನರ್ ಅವರಿಗೆ ಮನವಿ ಮಾಡಿಕೊಂಡರು.
ಮನವಿ ಹೀಗಿದೆ ನೋಡಿ..
ಮಾನ್ಯ ಪೊಲೀಸ್ ಆಯುಕ್ತರು,
ಹುಬ್ಬಳ್ಳಿ.
ಸಹಾಯಕ ಪೊಲೀಸ್ ಆಯುಕ್ತರ (ಹುಬ್ಬಳ್ಳಿ- ಉತ್ತರ ವಿಭಾಗ)
ಮಾನ್ಯರೆ,
ವಿಷಯ: ಲಾಕ್ ಡೌನ್ ನಿಯಮ ಉಲ್ಲಂಘಿಸಿ ರಸ್ತೆಗಿಳಿದ ವಾಹನಗಳನ್ನು ಪೊಲೀಸ್ ಸಿಬ್ಬಂದಿಗಳು ಸಿಜ್ ಮಾಡಿದ್ದು, ಮಾನವೀಯತೆ ದೃಷ್ಟಿಯಿಂದ ಬಿಡುಗಡೆ ಮಾಡುವ ಕುರಿತು.
ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಈ ಮೂಲಕ ತಮ್ಮಲ್ಲಿ ವಿನಂತಿಸಿಕೊಳ್ಳುವುದೇನೆಂದರೆ, ಸತತ 30-40 ದಿನಗಳಿಂದ ಅನಾವಶ್ಯಕವಾಗಿ ರಸ್ತೆಗೆ ಬಂದ ವಾಹನಗಳನ್ನು ಪೊಲೀಸ್ ಸಿಬ್ಬಂದಿ ಸೀಜ್ ಮಾಡಿದ್ದು ಶ್ಲಾಘನೀಯ, ಕೊರೊನಾ ವಿರುದ್ಧದ ಹೋರಾಟದಲ್ಲಿ ನಿಮ್ಮ ಜೊತೆಗೆ ನಮ್ಮ ಬೆಂಬಲವಿದೆ. ಆದರೆ ಕಳೆದ 6-7 ದಿನಗಳಿಂದ ಮುಂಗಾರು ಮಳೆ ಆರಂಭವಾಗಿದ್ದು ಮಳೆ ಹೊಡೆತಕ್ಕೆ ದ್ವಿಚಕ್ರ ವಾಹನಗಳು ನಿಧಾನಗತಿಯಲ್ಲಿ ಶಿಥಿಲಗೊಳ್ಳುತ್ತವೆ. ಇದರಿಂದ ಸಾರ್ವಜನಿಕರಿಗೆ ಕನಿಷ್ಠ ರೊ4000 ರಿಂದ ರೊ6000 ಸರ್ವಿಸ್ ವೆಚ್ಚವಾಗುತ್ತದೆ ( ರಿಲೀಸ್ ಆದ ನಂತರ). ಅಷ್ಟೇ ಅಲ್ಲದೆ ದ್ವಿಚಕ್ರ ವಾಹನಗಳು ಮಧ್ಯಮ ವರ್ಗದ ಬೆನ್ನೆಲುಬಾಗಿದ್ದು, ಅವರ ಅವಶ್ಯಕತೆಗಳಲ್ಲಿ ಒಂದಾಗಿದೆ. ಪ್ರಸ್ತುತ ಸ್ಥಿತಿಯಲ್ಲಿ ಯುವಕರು ಉದ್ಯೋಗವಿಲ್ಲದೆ ಆದಾಯವಿಲ್ಲದೆ ಪರದಾಡುತ್ತಿದ್ದಾರೆ ಪೋಷಕರು ಸಹ ಆದಾಯವಿಲ್ಲದೆ ಕಂಗಾಲಾಗಿದ್ದಾರೆ.
ಸಾರ್ವಜನಿಕರು ಅವಶ್ಯಕತೆಯ ಸಲುವಾಗಿ ಮತ್ತು ಅನಿವಾರ್ಯ ಕಾರಣಗಳಿಂದ ರಸ್ತೆಗೆ ಇಳಿದಿರುತ್ತಾರೆ. ಇಂಥವರಲ್ಲಿ ಉದ್ದೇಶಪೂರ್ವಕವಾಗಿ ಕಾನೂನು ಉಲ್ಲಂಘನೆ ಮಾಡುವ ಜನರು ಬಹಳ ಕಡಿಮೆ ಇರುತ್ತಾರೆ. ಇಂತಹ ಸಂದರ್ಭದಲ್ಲಿ ವಾಹನಗಳು ಕಾನೂನಿನ ಚೌಕಟ್ಟಿನಲ್ಲಿ ಬಿಡುಗಡೆ ಮಾಡಿ ತಾವುಗಳು ಶ್ರೀಸಾಮಾನ್ಯರ ನೆರವಿಗೆ ಬಂದು ಸಾರ್ವಜನಿಕರಿಗೆ ಅನುಕೂಲ ಮಾಡಬೇಕೆಂದು ತಮ್ಮಲ್ಲಿ ಗೌರವಪೂರ್ವಕವಾಗಿ ಕೇಳಿಕೊಳ್ಳುತ್ತೇನೆ.
ಧನ್ಯವಾದಗಳೊಂದಿಗೆ,
ರಜತ್ ವಿ ಉಳ್ಳಾಗಡ್ಡಿಮಠ
ಅಧ್ಯಕ್ಷರು, ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ಸಮಿತಿ.
ಮಾಜಿ ಮೇಯರ್ ವೆಂಕಟೇಶ ಮೇಸ್ತ್ರಿ,
ಮಾಜಿ ಪಾಲಿಗೆ ಸದಸ್ಯರು ಸುವರ್ಣ ಕಲಕುಂಟ್ಲಾ,
ಯುವ ಮುಖಂಡರು ಸುನಿಲ ಮಠಪತಿ,
ಸುರೇಶ ಯಾತಗೇರಿ,