“ಮಹಾತ್ಮರ ಖಾದಿ ಧ್ವಜ” ಜಗದೀಶ ಶೆಟ್ಟರಗೆ “ಗಿಫ್ಟ್” ಕೊಟ್ಟ ‘ರಜತ ಉಳ್ಳಾಗಡ್ಡಿಮಠ’….
1 min readಹುಬ್ಬಳ್ಳಿ: ಹರ ಘರ್ ತಿರಂಗಾ ಹೆಸರಿನಲ್ಲಿ ಫಾಲಿಸ್ಟರ್ ಧ್ವಜಗಳನ್ನ ಹಾರಿಸಲು ಮುಂದಾಗಿರುವುದನ್ನ ಖಂಡಿಸಿ ಕಾಂಗ್ರೆಸ್ ಪಕ್ಷ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ನಿವಾಸಕ್ಕೆ ತೆರಳಿ ಖಾದಿ ಧ್ವಜವನ್ನ ನೀಡಿ, ದೇಶದ ಇತಿಹಾಸವನ್ನ ಸ್ಮರಿಸುವಂತೆ ಮನವಿ ಮಾಡಿದ್ರು.
ಏನೂ ನಡೀತು.. ಇಲ್ಲಿದೆ ನೋಡಿ ಸಂಪೂರ್ಣ ವೀಡಿಯೋ..
ರಾಷ್ಟ್ರೀಯ ಕೈಮಗ್ಗ ದಿನದ ಅಂಗವಾಗಿ ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಜತ್ ಉಳಾಗಡ್ಡಿಮಠ ರಾಷ್ಟ್ರಧ್ವಜ ತಯಾರಿಸುವ ನೇಕಾರರ ಉಪಜೀವನವನ್ನು ರಕ್ಷಿಸುವ ಸಲುವಾಗಿ ಮತ್ತು ಮಹಾತ್ಮ ಗಾಂಧೀಜಿ ಕಂಡ ಸ್ವದೇಶಿ ಕೈಮಗ್ಗದ ಧ್ವಜದ ಶ್ರೀಮಂತ ಪರಂಪರೆಯನ್ನು ಉಳಿಸಿ ಬೆಳೆಸುವ ಗುರುತರ ಜವಾಬ್ದಾರಿಯನ್ನು ನಿಭಾಯಿಸಬೇಕೆಂದು ಬೇಂಗೇರಿಯ ಖಾದಿ ಗ್ರಾಮೋದ್ಯೋಗದಲ್ಲಿ ತಯಾರಿಸಿದ ತ್ರಿವರ್ಣ ಧ್ವಜವನ್ನು ತಮ್ಮ ಮನೆಯ ಮೇಲೆ ಹಾರಿಸಿ ಎಂದು ಶಾಸಕ ಜಗದೀಶ ಶೆಟ್ಟರ ಅವರಿಗೆ ಖಾದಿ ಧ್ವಜವನ್ನ ರಜತ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಮಾಜಿ ಮಹಾಪೌರ ಪ್ರಕಾಶ ಕ್ಯಾರಕಟ್ಟಿ. ಹೂವಪ್ಪ ದಾಯಗೋಡಿ, ಪೀರಾಜಿ ಖಂಡೇಕಾರ, ಉಣಕಲ್ ಬ್ಲಾಕ್ ಅಧ್ಯಕ್ಷ ಶರೀಫ್ ಗರಗದ, ಸುನೀಲ ಮಠಪತಿ, ಸೇವಾದಳದ ಮುಖ್ಯ ಸಂಚಾಲಕ ದೊಡ್ಡರಾಮಪ್ಪ ದೊಡ್ಡಮನಿ, ಪ್ರಸನ್ನ ಕುಲಕರ್ಣಿ, ಅಶೋಕ್ ಚಲವಾದಿ, ಬಸವರಾಜ ಮಾಗೆಡಿ, ಕಾಶಿಮ ಕುಡಲಗಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.