ಹುಬ್ಬಳ್ಳಿ ಕಸ ಕಾರ್ಪೋರೇಶನ್ ಕಚೇರಿಗೆ ತಂದು ಹಾಕಿ ಪ್ರತಿಭಟಿಸಿದ ಕಾಂಗ್ರೆಸ್ಸಿಗರು…!

ಹುಬ್ಬಳ್ಳಿ: ಮಹಾನಗರ ಪಾಲಿಕೆಯಲ್ಲಿ ಕಸವನ್ನ ವಿಲೇವಾರಿ ಮಾಡಲು ಸಾಧ್ಯವಾಗದೇ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಮಹಾನಗರ ಪಾಲಿಕೆಗೆ ಕಸದ ಸಮೇತ ಬಂದು ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯ ಸಂಪೂರ್ಣ ವೀಡಿಯೋ ಇಲ್ಲಿದೆ ನೋಡಿ..
ನಗರದ ಬಹುತೇಕ ಪ್ರದೇಶದಲ್ಲಿ ಕಸ ವಿಲೇವಾರಿ ಮಾಡುವಲ್ಲಿ ಅಧಿಕಾರಿಗಳು ಸಂಪೂರ್ಣವಾಗಿ ನಿರ್ಲಕ್ಷ್ಯ ವಹಿಸಿದ್ದಾರೆ. ಕೇವಲ ಪ್ರಮುಖ ಸ್ಥಳದಲ್ಲಿ ಮಾತ್ರ ಸರಿಯಾಗಿಡುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಕಾರ್ಯಕರ್ತರು ಆಗ್ರಹಿಸಿದರು.
ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾಧ್ಯಕ್ಷ ಅಲ್ತಾಫ್ ಹಳ್ಳೂರ್, ರಜತ ಉಳ್ಳಾಗಡ್ಡಿಮಠ, ಸುವರ್ಣ ಕಲಕುಂಟಳಾ, ಶಾಹ್ಝಮಾನ್ ಮುಜಾಹಿದ್, ನಾಗರಾಜ ಗೌರಿ, ಪ್ರಕಾಶ್ ಕುರಹಟ್ಟಿ, ಆರಿಫ್ ಭದ್ರಾಪುರ, ಸಂದಿಲ್ ಕುಮಾರ್, ಮಯೂರ್ ಮೊರೆ, ಇಕ್ಬಾಲ್ ನವಲೂರ್, ಷರೀಫ್ ಗರಗದ್, ನಿರಂಜನ್ ಹಿರೇಮಠ, ಮೋಹನ್ ಹಿರೇಮನಿ ಉಪಸ್ಥಿತರಿದ್ದರು.