‘ಚಾ’ ಮಾಡಿ “ಚಾಯ್ ವಾಲಾ” ವಿರುದ್ಧ ದೀಪಾ ಗೌರಿ, ಜ್ಯೋತಿ ವಾಲಿಕಾರ ನೇತೃತ್ವದಲ್ಲಿ ಹೋರಾಟ…
1 min readಹುಬ್ಬಳ್ಳಿ: ಹೆಚ್ಚಳವಾಗುತ್ತಿರುವ ಗ್ಯಾಸ್ ಸಿಲೆಂಡರ್ ಬೆಲೆಯನ್ನ ಖಂಡಿಸಿ ಹುಬ್ಬಳ್ಳಿ-ಧಾರವಾಡ ಜಿಲ್ಲಾ ಮಹಿಳಾ ಕಾಂಗ್ರೆಸ್ ಹಾಗೂ ಉಣಕಲ್ ಬ್ಲಾಕ್ ಮಹಿಳಾ ಕಾಂಗ್ರೆಸ್ ನೇತೃತ್ವದಲ್ಲಿ ಉಣಕಲ್ ಕ್ರಾಸ್ ನಲ್ಲಿ ಪ್ರತಿಭಟನೆ ನಡೆಸಲಾಯಿತು.
ಹುಬ್ಬಳ್ಳಿ ಧಾರವಾಡ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ದೀಪಾ ನಾಗರಾಜ್ ಗೌರಿ ಅಧ್ಯಕ್ಷತೆ ಹಾಗೂ ಉಣಕಲ್ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ ವಾಲಿಕಾರ ನೇತೃತ್ವದಲ್ಲಿ, ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ನಿರಂತರವಾಗಿ ಸುರಿಯುತ್ತಿರುವ ಮಳೆಯನ್ನು ಲೆಕ್ಕಿಸದೆ ಮಹಿಳಾ ಕಾರ್ಯಕರ್ತೆಯರು ಒಲೆ ಹಚ್ಚಿ ಚಹಾ ಮಾಡುವ ಮೂಲಕ ವಿನೂತನವಾಗಿ ಪ್ರತಿಭಟಿಸಿದರು.
ದೀಪಾ ಗೌರಿ ಮಾತನಾಡಿ, ದಿನನಿತ್ಯ ಬೆಲೆ ಏರಿಕೆಯಿಂದ ಜನರು ಪರದಾಡುತ್ತಿದ್ದಾರೆ. ಇದರ ನಡುವೆ ಹಲವು ಬಾರಿ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ಅಡುಗೆ ಎಣ್ಣೆ, ಹಾಲು, ತುಪ್ಪ ಬೇಳೆ ಹೀಗೆ ದಿನನಿತ್ಯ ಬಳಸುವ ಸಾಮಗ್ರಿಗಳ ಬೆಲೆ ಏರಿಕೆಯಿಂದ ಜನರು ತತ್ತರಿಸುತ್ತಿದ್ದಾರೆ. ಆದ್ರಿಂದ ಕೂಡಲೇ ಬೆಲೆ ಏರಿಕೆ ಹಿಂಪಡೆಯಬೇಕೆಂದು ಆಗ್ರಹಿಸಿದರು.
ಬ್ಲಾಕ್ ಅಧ್ಯಕ್ಷರುಗಳಾದ ಜ್ಯೋತಿ ವಾಲಿಕಾರ ಹಾಗೂ ಚೇತನಾ ಲಿಂಗದಾಳ್ ಮಾತನಾಡಿ, ಬೆಲೆ ಏರಿಕೆ ಕ್ರಮ ಖಂಡಿಸಿದರಲ್ಲದೆ, ಬೆಲೆ ಏರಿಕೆ ಹಿಂಪಡೆಯದ್ದಿದರೆ, ಮುಂಬರುವ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಬ್ಲಾಕ್ ಅಧ್ಯಕ್ಷರುಗಳಾದ ಸುಜನ್ ಕಾಕಿ, ಬಾಳಮ್ಮ ಜಂಗಿನವರ್, ಲಕ್ಷ್ಮಿ ಗುತ್ತೆ, ಅಕ್ಕಮ್ಮ ಕಂಬಳಿ, ವಾರ್ಡ್ ಅಧ್ಯಕ್ಷರಾದ ಶಶಿಕಲಾ ಹಳ್ಯಾಳ್, ಸುಧಾ ಕಮದೊಡ್ಡ, ಕಲಾವತಿ ಧಟ್ಟವಡಿ, ಸುಮಾ ಮಾಳಗಿ, ಬೀಬಿಜಾನ್ ನದಾಫ್, ದೀಪಾ. ವಿ ಬಿ, ಲಲಿತಾ, ಮನೀಲಾ ಸೇರಿದಂತೆ ಹಲವರು ಭಾಗವಹಿಸಿದ್ದರು.