Posts Slider

Karnataka Voice

Latest Kannada News

ಹುಬ್ಬಳ್ಳಿ ಕಾಂಗ್ರೆಸ್ ನಲ್ಲಿ ನಿಲ್ಲದ ಗುಂಪುಗಾರಿಕೆ..?- ದೆಹಲಿ ರಿಟರ್ನ್ಡ್ ಪ್ರಾಬ್ಲಂ…!

Spread the love

ಹುಬ್ಬಳ್ಳಿ: ಆಂತರಿಕ ಗುಂಪುಗಾರಿಕೆಯಿಂದಾಗಿಯೇ ನೆಲಕಚ್ಚಿ, ಮತ್ತೆ ಜಿಲ್ಲೆಯಲ್ಲಿ ಮೇಲಕ್ಕೇಳಲು ಹರಸಾಹಸ ಪಡುತ್ತಿರುವ ಕಾಂಗ್ರೆಸ್ ಪಕ್ಷದಲ್ಲಿ ಮತ್ತೆ ಗುಂಪುಗಾರಿಕೆ ಸದ್ದಿಲ್ಲದಂತೆ ನಡೆದಿದೆ ಎಂಬ ಮಾತು ಈಗ ಗುಪ್ತವಾಗಿ ಉಳಿದಿಲ್ಲ.

ಮಹಾನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬದಲಾವಣೆ ಪ್ರಕ್ರಿಯೆ ನಡೆದಿದೆ ಎಂಬ ವದಂತಿ ಪಕ್ಷದಲ್ಲಿ ಪಸರಿಸಿರುವ ಬೆನ್ನಲ್ಲೇ ದೆಹಲಿ ರಿಟರ್ನ್ ಪಕ್ಷದ ಮುಖಂಡರೊಬ್ಬರು ಕಾರ್ಯಕರ್ತರ ಸಭೆ ಕರೆದು ಪಕ್ಷ ಸಂಘಟನೆ ಹಾಗೂ ಮೋದಿ ಸರಕಾರದ ಆಡಳಿತದ ವಿರುದ್ಧ ಹೋರಾಟದ ರೂಪುರೇಷೆಗಳನ್ನು ಚರ್ಚಿಸಲು ಸಭೆ ನಡೆಸಿರುವುದು ಈಗ ಗುಪ್ತವಾಗಿ ಉಳಿದಿಲ್ಲ.

ಗಣರಾಜ್ಯೋತ್ಸವದಿನದಂದು ಸಂಜೆ ನಡೆದ ಸಭೆಯಲ್ಲಿ 150 ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಸಭೆಯಲ್ಲಿ ಭಾಗವಹಿಸಿದ್ದರೆನ್ನಲಾಗಿದೆ. ದೆಹಲಿ ರಿಟರ್ನ್ ನಾಯಕರ ಮನೆ ಆವರಣದಲ್ಲಿ ನಡೆದ ಸಭೆಯಲ್ಲಿ ಯಾವೊಬ್ಬ ಸ್ಥಳೀಯ ಪ್ರಮುಖ ನಾಯಕ ಪಾಲ್ಗೊಂಡಿರಲಿಲ್ಲ, ಏಕೆ ಎಂಬ ಪ್ರಶ್ನೆ ಈಗ ಪಕ್ಷದಲ್ಲಿ ಚರ್ಚೆ ಯಾಗುತ್ತಿದೆ.

ಪಕ್ಷ ಸಂಘಟನೆ, ಹೋರಾಟದ ಬಗ್ಗೆ ಚರ್ಚೆ ನಡೆಸುವ ಉದ್ದೇಶವೇ ಆಗಿದ್ದರೆ ಪಕ್ಷದ ಕಛೇರಿ ಬಿಟ್ಟು ಬೇರೆಡೆ ಸಭೆ ಕರೆಯುವ ಉದ್ದೇಶವೇನು? ಒಂದು ವೇಳೆ ಸ್ಥಳೀಯ ಪ್ರಮುಖ ನಾಯಕರಿಗೆ ಸಭೆಯಬಗ್ಗೆ ಆಹ್ವಾನಿಸಿದ್ದೆ ಆದರೆ ಯಾರೂ ಏಕೆ ಸಭೆಯಲ್ಲಿ ಪಾಲ್ಗೊಂಡಿಲ್ಲ? ಎಂದೂ ಕಾರ್ಯಕರ್ತರು ಚರ್ಚಿಸತೊಡಗಿದ್ದಾರೆ.

ಆಂತರಿಕ ಗುಂಪುಗಾರಿಕೆಯಿಂದಾಗಿಯೇ ನೆಲಕಚ್ಚಿ, ಮತ್ತೆ ಜಿಲ್ಲೆಯಲ್ಲಿ ಮೇಲಕ್ಕೇಳಲು ಹರಸಾಹಸ ಪಡುತ್ತಿರುವ ಕಾಂಗ್ರೆಸ್ ಪಕ್ಷದಲ್ಲಿ ಮತ್ತೆ ಗುಂಪುಗಾರಿಕೆ ಸದ್ದಿಲ್ಲದಂತೆ ನಡೆದಿದೆ ಎಂಬ ಮಾತು ಈಗ ಗುಪ್ತವಾಗಿ ಉಳಿದಿಲ್ಲ.

ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬದಲಾವಣೆ ಪ್ರಕ್ರಿಯೆ ನಡೆದಿದೆ ಎಂಬ ವದಂತಿ ಪಕ್ಷದಲ್ಲಿ ಪಸರಿಸಿರುವ ಬೆನ್ನಲ್ಲೇ ಪಕ್ಷದ ದೆಹಲಿ ರಿಟರ್ನ್ ಮುಖಂಡರೊಬ್ಬರು ಕಾರ್ಯಕರ್ತರ ಸಭೆ ಕರೆದು ಪಕ್ಷ ಸಂಘಟನೆ ಹಾಗೂ ಮೋದಿ ಸರಕಾರದ ಆಡಳಿತದ ವಿರುದ್ಧ ಹೋರಾಟದ ರೂಪುರೇಷೆಗಳನ್ನು ಚರ್ಚಿಸಲು ಸಭೆ ನಡೆಸಿರುವುದು ಈಗ ಗುಪ್ತವಾಗಿ ಉಳಿದಿಲ್ಲ.

ಗಣರಾಜ್ಯೋತ್ಸವದಿನದಂದು ಸಂಜೆ ನಡೆದ ಸಭೆಯಲ್ಲಿ 150ಕ್ಕೂ ಹೆಚ್ಚು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಸಭೆಯಲ್ಲಿ ಭಾಗವಹಿಸಿದ್ದರೆನ್ನಲಾಗಿದೆ. ದೆಹಲಿ ರಿಟರ್ನ್ ನಾಯಕರ ಮನೆ ಆವರಣದಲ್ಲಿ ನಡೆದ ಸಭೆಯಲ್ಲಿ ಯಾವೊಬ್ಬ ಸ್ಥಳೀಯ ಪ್ರಮುಖ ನಾಯಕ ಪಾಲ್ಗೊಂಡಿರಲಿಲ್ಲ, ಏಕೆ? ಎಂಬ ಪ್ರಶ್ನೆ ಈಗ ಪಕ್ಷದಲ್ಲಿ ಚರ್ಚೆ ಯಾಗುತ್ತಿದೆ.

ಪಕ್ಷ ಸಂಘಟನೆ, ಹೋರಾಟದ ಬಗ್ಗೆ ಚರ್ಚೆ ನಡೆಸುವ ಉದ್ದೇಶವೇ ಆಗಿದ್ದರೆ ಪಕ್ಷದ ಕಛೇರಿ ಬಿಟ್ಟು ಬೇರೆಡೆ ಸಭೆ ಕರೆಯುವ ಉದ್ದೇಶವೇನು? ಒಂದು ವೇಳೆ ಸ್ಥಳೀಯ ಪ್ರಮುಖ ನಾಯಕರಿಗೆ ಸಭೆಯಬಗ್ಗೆ ಆಹ್ವಾನಿಸಿದ್ದೆ ಆದರೆ ಯಾರೂ ಏಕೆ ಸಭೆಯಲ್ಲಿ ಪಾಲ್ಗೊಂಡಿಲ್ಲ? ಎಂದೂ ಕಾರ್ಯಕರ್ತರು ಚರ್ಚಿಸತೊಡಗಿದ್ದಾರೆ.

ಸಧ್ಯ AICC ಅಥವಾ KPCCಯ ಪದಾಧಿಕಾರಿಯೂ ಇಲ್ಲದ ಮುಖಂಡ ತಾನು ಯಾವ ಕಾರಣಕ್ಕಾಗಿ ಸಭೆ ಕರೆದರು ಎಂದು ತಿಳಿಯಲಾರದೆ ಮೈ ಪರಚಿಕೊಂಡು ಸಭೆಯಲ್ಲಿ ಪಾಲ್ಗೊಂಡವರು ಚಹಾ ಹಾಗೂ ಅಲ್ಪೋಪಹಾರ ಸೇವಿಸಿ ಹೊರನಡೆದಿದ್ದಾರೆ. ಒಟ್ಟಾರೆ ಕಾಂಗ್ರೆಸ್ ಪಕ್ಷ ಆಂತರಿಕ ಗುಂಪುಗಾರಿಕೆಯಿಂದ ಮುಕ್ತಿ ಹೊಂದುವುದು ಎಂದು? ಎಂಬ ಪ್ರಶ್ನೆ ಜಿಲ್ಲಾ ಕಾಂಗ್ರೆಸ್ಸಿಗರಿಗೆ ಕಾಡಲಾರಂಭಿಸಿದೆ‌


Spread the love

Leave a Reply

Your email address will not be published. Required fields are marked *