ಕೇಂದ್ರ ಸರಕಾರದ ವಿರುದ್ಧ ನವಲಗುಂದದಲ್ಲಿ ಪ್ರತಿಭಟನೆ…!
1 min readನವಲಗುಂದ: ಕೇಂದ್ರ ಸರಕಾರದ ತೈಲ ಬೆಲೆ ಏರಿಕೆಯನ್ನ ಖಂಡಿಸಿ ನವಲಗುಂದ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಕುರಹಟ್ಟಿ ಪೆಟ್ರೋಲ್ ಬಂಕ್ ಮತ್ತು ಎಸ್ ಪಿ ಪೆಟ್ರೋಲ್ ಬಂಕ್ ಮುಂಬಾಗದಲ್ಲಿ ಪ್ರತಿಭಟನೆ ನಡೆಸಲಾಯಿತು.
ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿರಂತರವಾಗಿ ಹೆಚ್ಚಿಸುವ ಮೂಲಕ ಕೊರೋನಾದಿಂದ ಸಂಕಷ್ಟದಲ್ಲಿರುವ ಜನರ ಗಾಯದ ಮೇಲೆ ಬರೆ ಹಾಕುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ನವಲಗುಂದ ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಕುರಹಟ್ಟಿ ಪೆಟ್ರೋಲ್ ಬಂಕ್ ಮತ್ತು ಎಸ್ ಪಿ ಪೆಟ್ರೋಲ್ ಬಂಕ್ ಮುಂಬಾಗದಲ್ಲಿ 100-ನಾಟೌಟ್ ಹೆಸರಿನಲ್ಲಿ ಪ್ರತಿಭಟನೆ ಮಾಡಲಾಯಿತು.
ಮಾಜಿ ಸಚಿವ ಕೆ.ಎನ್. ಗಡ್ಡಿ, ಧಾರವಾಡ ಜಿಲ್ಲಾ ಗ್ರಾಮೀಣ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ವಿನೋದ ಅಸೂಟಿ, ನವಲಗುಂದ ಬ್ಲಾಕ್ ಉಸ್ತುವಾರಿ ಪ್ರಕಾಶಗೌಡ ಪಾಟೀಲ, ನವಲಗುಂದ ಅಣ್ಣಿಗೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ವರ್ಧಮಾನಗೌಡ ಹಿರೇಗೌಡ್ರ , ಮಂಜುನಾಥ್ ಮಾಯಣ್ಣವರ, ಪುರಸಭೆ ಅಧ್ಯಕ್ಷರ ಮಂಜು ಜಾಧವ, ವಿ.ಪಿ. ಪಾಟೀಲ್, ಆರ್.ಎಚ್. ಕೋನರಡ್ಡಿ, ಶಿವಾನಂದ ಕರಿಗಾರ, ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಸದುಗೌಡ ಪಾಟೀಲ್, ಶಿವಾನಂದ ಭೂಮಣ್ಣವರ, ರವಿ ಬೆಂಡಿಗೇರಿ, ಸುಲೆಮಾನ ನಾಶೀಪುಡಿ, ಉಸ್ಮಾನ್ ಬಬರ್ಚಿ, ಇಮಾಮ್ ಪಿರೇಖಾನ್, ಷರೀಫ್ ಗುದಗಿ, ಬಸಯ್ಯ ಮೂಲಿಮನಿ, ಬೀರಪ್ಪ ನಾಗನೂರ, ನಾರಾಯಣ ನಲವಡಿ, ದೀಪಕ್ ಮುದರಡ್ಡಿ, ನಾರಾಯಣ ರಂಗರೆಡ್ಡಿ, ಮೌನೇಶ್ ರೇವಣ್ಣವರ, ಆಕಾಶ ಸೋಮನಗೌಡ್ರ, ರಾಜು ದೊಡ್ಡಮನಿ, ಮಹಾದೇವ ಚುಂಚನೂರ, ಗುರುನಾಥ್ ಹಳ್ಳೂರ ಉಪಸ್ಥಿತರಿದ್ದರು.