“ಎಂಎಲ್ಸಿ ಟಿಕೆಟ್”- ಸಲೀಂ ಅಹ್ಮದ ಮುಂಚೂಣಿಯಲ್ಲಿ, ಹಿಂಡಸಗೇರಿ, ಶಾಕೀರ ಸನದಿ, ತಮಾಟಗಾರ ಕಾಂಪಿಟೇಶನ್…!

ಬೆಂಗಳೂರು: ರಾಜ್ಯದಲ್ಲಿ ಡಿಸೆಂಬರ್ 10ರಂದು ವಿಧಾನಪರಿಷತ್ ಚುನಾವಣೆ ನಡೆಯಲಿದ್ದು, ಧಾರವಾಡ ಸ್ಥಳೀಯ ಸಂಸ್ಥೆಗಳಿಗೆ ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಯಾರಿಗೆ ಎಂಬ ಕುತೂಹಲ ಬಹುತೇಕರಿಗೆ ಮೂಡಿದೆ.

ಭಾರತೀಯ ಜನತಾ ಪಕ್ಷದಿಂದ ಈಗಾಗಲೇ ಹಾಲಿ ವಿಧಾನಪರಿಷತ್ ಸದಸ್ಯ ಪ್ರದೀಪ ಶೆಟ್ಟರ ಅವರಿಗೆ ಪೈನಲ್ ಆಗಿದೆಯಂದು ಹೇಳಲಾಗಿದೆ. ಹಾಗೇ ಕಾಂಗ್ರೆಸ್ ನಲ್ಲಿ ಮಾತ್ರ ಇನ್ನೂ ಹಗ್ಗ-ಜಗ್ಗಾಟ ಮುಂದುವರೆದಿದೆ.
ಕೆಪಿಸಿಸಿಯಿಂದಲೂ ಬಹುತೇಕ ಸಲೀಂ ಅಹ್ಮದ ಅವರಿಗೆ ಕೊಡಬೇಕೆಂದು ನಿರ್ಧಾರವಾಗಿದೆ ಎಂದು ಹೇಳಲಾಗಿದೆಯಾದರೂ, ಹುಬ್ಬಳ್ಳಿ-ಧಾರವಾಡ ಮುಸ್ಲಿಂ ನಾಯಕರಿಗೆ ಟಿಕೆಟ್ ಕೊಡಬೇಕೆಂದು ಒತ್ತಾಯಗಳು ಹೆಚ್ಚಾಗಿವೆ.

ಕೆಪಿಸಿಸಿಯ ನಿರ್ಧಾರದಂತೆ ನಡೆದರೇ ಸಲೀಂ ಅಹ್ಮದ ಅವರು ಅಭ್ಯರ್ಥಿಯಾಗಲಿದ್ದಾರೆ. ನಂತರದ ಸ್ಥಾನದಲ್ಲಿ ಎ.ಎಂ.ಹಿಂಡಸಗೇರಿ, ಶಾಕೀರ ಸನದಿ ಮತ್ತು ಇಸ್ಮಾಯಿಲ ತಮಾಟಗಾರ ಪ್ರಯತ್ನ ಮುಂದುವರೆಸಿದ್ದಾರೆಂದು ಗೊತ್ತಾಗಿದೆ.

ಧಾರವಾಡದಲ್ಲಿ ಕೆಲವರು ಈಗಾಗಲೇ ಟಿಕೆಟ್ ಸಿಕ್ಕಿದೆ ಎಂದು ಫುಕಾರು ಎಬ್ಬಿಸುತ್ತಿದ್ದಾರೆ ಹೊರತು, ಅದು ನಿಜವಲ್ಲ ಎಂಬುದು ರಾಜಕೀಯ ಪಂಡಿತರಿಗೆ ಗೊತ್ತಾಗಿದೆ.
ಕಾಂಗ್ರೆಸ್ ಅಭ್ಯರ್ಥಿ ಯಾರು ಎಂಬುದು ಇಂದು ಸಂಜೆಯೊಳಗೆ ಹೊರ ಬೀಳುವ ಸಾಧ್ಯತೆಯಿದೆ.