ರಾಜ್ಯ ರಾಜಕಾರಣದಲ್ಲಿ “ಸಂತೋಷ ಲಾಡ-ವಿನಯ ಕುಲಕರ್ಣಿ” ಗೆ ಮಹತ್ವದ ಜವಾಬ್ಧಾರಿ…
1 min readಬೆಂಗಳೂರು: ರಾಷ್ಟ್ರೀಯ ಕಾಂಗ್ರೆಸ್ ಪಕ್ಷವೂ ರಾಜ್ಯದಲ್ಲಿ ಮಹತ್ವದ ನಿರ್ಣಯವನ್ನ ತೆಗೆದುಕೊಂಡಿದ್ದು, ಪ್ರಮುಖರಿಗೆ ಮಹತ್ವದ ಹುದ್ದೆಗಳನ್ನ ನೀಡಿ ಪಕ್ಷ ಸಂಘಟನೆಗೆ ಮುಂದಾಗಿದ್ದು, ಕೆಪಿಸಿಸಿ ಪದಾಧಿಕಾರಿಗಳ ಅಧಿಕೃತ ಆದೇಶ ಹೊರ ಬಿದ್ದಿದೆ.
ರಾಜ್ಯದಲ್ಲಿ 40 ಉಪಾಧ್ಯಕ್ಷ ಸ್ಥಾನಗಳನ್ನ ಸೃಷ್ಟಿಸಿದ್ದು, ಇದರಲ್ಲಿ ಮಾಜಿ ಸಚಿವರುಗಳಾದ ಸಂತೋಷ ಲಾಡ, ವಿನಯ ಕುಲಕರ್ಣಿ ಅವರಿಗೂ ಸ್ಥಾನ ಲಭಿಸಿದ್ದು, ಈ ಜೋಡೆತ್ತುಗಳು ಉತ್ತರ ಕರ್ನಾಟಕದಲ್ಲಿ ಕಮಾಲ್ ಮಾಡಲಿವೆ ಎಂಬ ಲೆಕ್ಕಾಚಾರ ಇದರಲ್ಲಿ ಅಡಗಿದೆ.
ಇದೇ ಸಮಯದಲ್ಲಿ 109 ಜನರಲ್ ಸೆಕ್ರಟರಿಗಳನ್ನೂ ನೇಮಕ ಮಾಡಿದೆ. ಇದರಲ್ಲಿ ಪ್ರಮುಖವಾಗಿ ಅನಿಲಕುಮಾರ ಪಾಟೀಲ, ಶಾಕೀರ ಸನದಿ, ಸದಾನಂದ ಡಂಗನವರ ಅವರುಗಳಿಗೆ ಅವಕಾಶ ದೊರೆತಿದೆ.
ರಾಜ್ಯಕ್ಕೆ ರಾಹುಲ ಗಾಂಧಿ ಅವರು ಬಂದು ಹೋದ ಒಂದೇ ವಾರದಲ್ಲಿ ಮಹತ್ವದ ನಿರ್ಣಯವನ್ನ ತೆಗೆದುಕೊಂಡು ಪಕ್ಷ ಸಂಘಟನೆಗೆ ಮುಂದಾಗಿದ್ದಾರೆ.