ಬಿಜೆಪಿಯಲ್ಲಿ ಸಿಡಿ ತಳಮಳ: ಕಾಂಗ್ರೆಸ್ ಆರಂಭಿಸಿದ ‘ಜನಧ್ವನಿ ಜಾಥಾ’…!
1 min readಬೆಂಗಳೂರು: ಕೇಂದ್ರ ಸರಕಾರ ಹಾಗೂ ರಾಜ್ಯದ ಬಿಜೆಪಿ ಸರಕಾರದ ವಿರುದ್ಧ ಕಾಂಗ್ರೆಸ್ ಪಕ್ಷ ‘ಜನಧ್ವನಿ ಜಾಥಾ’ ಆರಂಭಿಸಿದ್ದು, ಎರಡು ಸರಕಾರಗಳ ವೈಪಲ್ಯಗಳನ್ನ ಜನರಿಗೆ ತಿಳಿಸಲು ಮುಂದಾಗಿದೆ.
ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷದ ಸರಕಾರ ಬರಲು ಕಾರಣವಾಗಿರುವ ಜಲ ಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿಯವರದ್ದು ಎನ್ನಲಾದ ಸಿಡಿ ಬಯಲಿಗೆ ಬಂದ ನಂತರ ತಳಮಳ ಆರಂಭವಾಗಿದ್ದು, ಅದೇ ಸಮಯದಲ್ಲಿ ಕಾಂಗ್ರೆಸ್ ಜನಧ್ವನಿ ಜಾಥಾ ಆರಂಭಿಸಿ ಜನರ ಬಳಿ ಹೊರಟು ನಿಂತಿದೆ.
ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರಕಾರದ ವೈಫಲ್ಯಗಳ ವಿರುದ್ಧ ಇಂದಿನಿಂದ ಆರಂಭಿಸಿರುವ “ಜನಧ್ವನಿ ಜಾಥಾ”ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹಮದ್, ಈಶ್ವರ ಖಂಡ್ತೆ, ರಾಮಲಿಂಗಾರರಡ್ಡಿ, ಧೃವನಾರಾಯಣ್ ಮತ್ತಿತರ ಮುಖಂಡರು ಕ್ವೀನ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಕಚೇರಿ ಮುಂದೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.
ಸಾವಿರಾರೂ ಕಾರ್ಯಕರ್ತರು ಭಾಗವಹಿಸಿ ಕೇಂದ್ರ ಹಾಗೂ ರಾಜ್ಯ ಸರಕಾರದ ವಿರುದ್ಧ ಘೋಷಣೆಯನ್ನ ಕೂಗಿದರು. ನಗರದಲ್ಲಿ ಆರಂಭಗೊಂಡ ಯಾತ್ರೆಯು ನಂತರ ದೇವನಹಳ್ಳಿಯತ್ತ ತೆರಳಿತು.