Posts Slider

Karnataka Voice

Latest Kannada News

ಕಾಂಗ್ರೆಸನವರು “ವೀರ ಸಾವರ್ಕರ್” ಭಾವಚಿತ್ರ ಸುಟ್ಟಿಲ್ಲ: ದೀಪಕ ಚಿಂಚೋರೆ…

Spread the love

ಧಾರವಾಡ: ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ವಾಹನದ ಮೇಲೆ ಮೊಟ್ಟೆ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೋರಾಟ ನಡೆಸುತ್ತಿದ್ದ ವೇಳೆಯಲ್ಲಿ ನಾವೂ ವೀರ ಸಾವರ್ಕರ್ ಭಾವಚಿತ್ರವನ್ನ ಸುಟ್ಟಿಲ್ಲವೆಂದು ಕಾಂಗ್ರೆಸ್ ಮುಖಂಡ ದೀಪಕ ಚಿಂಚೋರೆ ಹೇಳಿದ್ದಾರೆ.

ವೈರಲ್ ಆಗಿರುವ ಭಾವಚಿತ್ರ

ಭಜರಂಗದಳದ ಕಾರ್ಯಕರ್ತರು ಹೋರಾಟ ನಡೆಸುತ್ತಿರುವ ಹಿನ್ನೆಲೆಯಲ್ಲಿ ದೀಪಕ ಚಿಂಚೋರೆ ಪ್ರಕಟಣೆ ಹೊರಡಿಸಿದ್ದು… ಅದರ ವಿವರ ಇಲ್ಲಿದೆ ನೋಡಿ..

ಧಾರವಾಡ : ಕಾಂಗ್ರೆಸ್ ಪಕ್ಷದ ವತಿಯಿಂದ
ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಹಮ್ಮಿಕೊಂಡಿದ್ದ ಪ್ರತಿಭಟನೆ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ವೀರ ಸಾವರ್ಕರ್ ಭಾವಚಿತ್ರ ದಹಿಸಿಲ್ಲ.
ಕೊಡಗು ಜಿಲ್ಲೆಯ ‌ಪ್ರವಾಸದಲ್ಲಿದ್ದ ವಿಧಾನಸಭೆಯ ಪ್ರತಿಪಕ್ಷ‌ ನಾಯಕ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಮೊಟ್ಟೆ ಎಸೆದ ಕೃತ್ಯವನ್ನು ಖಂಡಿಸಿ ನಗರದ ಕಲಾಭವನದಿಂದ ಜಿಲ್ಲಾಧಿಕಾರಿ ಕಚೇರಿತನಕ ಪಾದಯಾತ್ರೆ ನಡೆಸಿ, ನಂತರ ಅಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿತ್ತು. ಈ ಸಂದರ್ಭದಲ್ಲಿ ಗೃಹ ಸಚಿವ ಅರಗ ಜ್ಞಾನೇಂದ್ರ ಅವರ ಪ್ರತಿಕ್ರತಿ ದಹಿಸಿ, ಬಳಿಕ ಜಿಲ್ಲಾಧಿಕಾರಿಗಳಿಗೆ ಮನವಿ ಕೂಡ ಸಲ್ಲಿಸಲಾಯಿತು.
ಆದರೆ, ಪ್ರತಿಭಟನೆ ಸಮಯದಲ್ಲಿ ಯಾವುದೇ ಕಾಂಗ್ರೆಸ್ ಮುಖಂಡರಾಗಲಿ ಅಥವಾ ಕಾರ್ಯಕರ್ತರು ವೀರ ಸಾವರ್ಕರ್ ಅವರ ಭಾವಚಿತ್ರ ಅಥವಾ ಪ್ರತಿಕೃತಿ ದಹಿಸಿಲ್ಲ. ಈ ವಿಷಯ ನಮ್ಮ ಗಮನಕ್ಕೂ ಬಂದಿಲ್ಲ. ಆದ್ದರಿಂದ ವೀರ ಸಾವರ್ಕರ್ ಭಾವಚಿತ್ರ ಅಥವಾ ಪ್ರತಿಕೃತಿ ದಹನದ ಪ್ರಕರಣಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ.
ಒಂದು ವೇಳೆ ಇಂತಹ ಘಟನೆ ನಡೆದಿದ್ದರೆ ಅದು
ಕಾಂಗ್ರೆಸ್ಸಿಗರ ಮೇಲೆ ಗೂಬೆ ಕೂಡಿಸುವ ಷಡ್ಯಂತ್ರದ ಭಾಗವಾಗಿರಬಹುದು.

ಇಂದ
ದೀಪಕ ಚಿಂಚೋರೆ
ಎಐಸಿಸಿ ಸದಸ್ಯರು.


Spread the love

Leave a Reply

Your email address will not be published. Required fields are marked *