Big Exclusive- ಉಚ್ಚಾಟಿತ ಕಾಂಗ್ರೆಸ್ ಮುಖಂಡೆ “ಭೈತುಲ್ಲಾ ಕಿಲ್ಲೇದಾರ” ಕೋರ್ಟ್‌ಗೆ ಶರಣು- ನ್ಯಾಯಾಂಗ ಬಂಧನ….

ಹುಬ್ಬಳ್ಳಿ: ಅಂಗನವಾಡಿ ಮಕ್ಕಳ ಹಾಗೂ ಬಾಣಂತಿಯರ ಪೌಷ್ಟಿಕ ಆಹಾರ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಉಚ್ಚಾಟಿತ ಕಾಂಗ್ರೆಸ್ ಮುಖಂಡೆ ಇಂದು ಹುಬ್ಬಳ್ಳಿಯ ನ್ಯಾಯಾಲಯದ ಮುಂದೆ ಶರಣಾಗತಿಯಾಗಿದ್ದು, 14 ದಿನಗಳ ನ್ಯಾಯಾಂಗ ಬಂಧನವನ್ನ ಕೋರ್ಟ್ ವಿಧಿಸಿದೆ.
ಕಳೆದ ಹಲವು ದಿನಗಳಿಂದ ನಾಪತ್ತೆಯಾಗಿದ್ದ ಭೈತುಲ್ಲಾ ಕಿಲ್ಲೇದಾರ ವಿಷಯ ವಿಧಾನಸಭೆಯಲ್ಲಿಯೂ ಚರ್ಚೆಗೆ ಕಾರಣವಾಗಿತ್ತು. ಅಷ್ಟೇ ಅಲ್ಲ, ಬಂಧನವಾಗದ ಹಿನ್ನೆಲೆಯಲ್ಲಿ ಪೊಲೀಸರ ಮೇಲೂ ಅನುಮಾನ ಮೂಡಿತ್ತು.
ನ್ಯಾಯಾಂಗ ಬಂಧನಕ್ಕೆ ನೀಡಿರುವ ಭೈತುಲ್ಲಾ ಅವರನ್ನ ಪೊಲೀಸ್ ಕಸ್ಟಡಿಗೆ ನೀಡುವಂತೆ ಪೊಲೀಸರು ಕೇಳಿದ್ದು, ಈ ಕುರಿತು ಆದೇಶ ಹೊರಬರಬೇಕಿದೆ.