ಕಾಂಗ್ರೆಸ್ ಬಹುಮತ ಬರೋವರೆಗೂ ಬಸವರಾಜ ಹೊರಟ್ಟಿಯವರೇ “ಸಭಾಪತಿ”- ಗೌರವ ಸತ್ಕಾರದಲ್ಲಿ ಸಿಎಂ ಸಿದ್ಧರಾಮಯ್ಯ ಹೇಳಿಕೆ…!!!
ಹುಬ್ಬಳ್ಳಿ: ಕಾಂಗ್ರೆಸ್‌ಗೆ ಬಹುಮತದ ಒಂದು ಸೀಟು ಕೊರತೆ ಇರುವುದರಿಂದ ಹಾಲಿ ಸಭಾಪತಿ ಬಸವರಾಜ ಹೊರಟ್ಟಿಯವರೇ ಸಭಾಪತಿ ಆಗಿ ಮುಂದುವರೆಯುತ್ತಾರೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಹೇಳಿದರು.
ನಗರದ ನೆಹರು ಮೈದಾನದಲ್ಲಿ ನಡೆದ ಸಭಾಪತಿ ಬಸವರಾಜ ಹೊರಟ್ಟಿಯವರ ಗೌರವ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಿಎಂ ಅವರು ಮಾತನಾಡಿದರು.
ಮುಂದಿನ ಸಲ ಮತ್ತೆ ಬಸವರಾಜ ಹೊರಟ್ಟಿಯವರು ಚುನಾವಣೆಗೆ ನಿಂತರೇ, ನಾನು ನಮ್ಮ ಪಕ್ಷದ ಅಭ್ಯರ್ಥಿ ಪರವಾಗಿ ಪ್ರಚಾರ ಮಾಡುತ್ತೇನೆ ಎಂದರು.
