ಅಮೇರಿಕಾದಲ್ಲಿ “ಅಥಣಿ ಸಾವುಕಾರ್”- ದೇಶದಲ್ಲಿ ಕಾಣದ್ದು… ಅಲ್ಲಿ ಕಂಡಿದ್ದು…

ಜಾಲಿ ಮೂಡ್ ನಲ್ಲಿ ಸವದಿ ಸಾಹುಕಾರ್ ಪ್ರವಾಸದ ಝಲಕ್
ಜಾಲಿ ಮೂಡ್ ನಲ್ಲಿ ಸವದಿ ಸಾಹುಕಾರ್: ಅಮೇರಿಕಾ ಪ್ರವಾಸದ ಝಲಕ್
ಅಥಣಿ: ಚುನಾವಣೆ ಸಂದರ್ಭದಲ್ಲಿಂದ ನಿರಂತರ ಓಡಾಟ ಹಾಗೂ ರಾಜಕೀಯ ಒತ್ತಡದ ಮಧ್ಯೆ ಮಾಜಿ ಡಿಸಿಎಂ ಹಾಗೂ ಅಥಣಿ ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಅಮೇರಿಕಾ ಪ್ರವಾಸ ಕೈಗೊಂಡಿದ್ದಾರೆ.
ಕಳೆದ ಕೆಲ ದಿನಗಳಿಂದ ಹೊದ ದೇಶಗಳಲ್ಲಿ ಪ್ರವಾಸ ಹೋಗಿರುವ ಇವರು ಜಾಲಿ ಮೂಡ್ ನಲ್ಲಿ ಸುತ್ತಾಟ ನಡೆಸಿದ್ದಾರೆ. ಪ್ರವಾಸದ ಕುರಿಯ ಕೆಲ ಪೋಟೋ ಗಳನ್ನು ಸವದಿ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ.
ವಿಶ್ವದ ಅದ್ಭುತಗಳಲ್ಲಿ ಒಂದಾದ ಅಮೆರಿಕದ ಅರಿಜೋನಾ ದ ಗ್ರ್ಯಾಂಡ್ ಕ್ಯಾನ್ಯನ್‌ಗೆ ಹೆಲಿಕಾಪ್ಟರ್ ನಲ್ಲಿ ಭೇಟಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಕ್ಯಾನ್ಯನ್ ಆಳದ ನೀರಿನಲ್ಲಿ ಬೋಟಿಂಗ್ ಮಾಡಿರುವ ಪೋಟೋ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ರಾಜ್ಯ ರಾಜಕಾರಣದಲ್ಲಿ ತಮ್ಮದೇ ವೈಯಕ್ತಿಕ ವರ್ಚಸ್ಸು ಹೊಂದಿರುವ ಲಕ್ಷ್ಮಣ ಸವದಿ ಕಳೆದ ಚುನಾವಣೆಯಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಸಧ್ಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೇ ಮಾಡುತ್ತಾರೆ ಎಂಬ ಮಾತು ಕೂಡಾ ಕೇಳಿ ಬರುತ್ತಿದೆ.