ಕಾಂಗ್ರೆಸ್ ಕೊರೋನ ಟಾಸ್ಕ್ ಫೋರ್ಸ್: ಬಿಜೆಪಿ ಅವ್ಯವಹಾರದ ಬಗ್ಗೆ ಸಲೀಂ ಅಹ್ಮದ ವಾಗ್ಧಾಳಿ
1 min readಬೆಂಗಳೂರು: ಕೊರೋನ ನಿಯಂತ್ರಣಕ್ಕೆ ಸರ್ಕಾರದ ವೈಫಲ್ಯದ ಕುರಿತು ಹಿರಿಯ ನಾಯಕರ ಜೊತೆಗೆ ಡಿಕೆಶಿ ಚರ್ಚೆ ನಡೆಸಿದರು.
ಕೊರೋನ ಪ್ರಕರಣದಲ್ಲಿಗೆ ಖಾಸಗಿ ಆಸ್ಪತ್ರೆಗಳು ಹಾಸಿಗೆ ಕೊಡುತ್ತಿಲ್ಲ. ರಾಜ್ಯ ಸರ್ಕಾರ ಕೊರೋನ ಹೆಸರಿನಲ್ಲಿ ಭ್ರಷ್ಟಾಚಾರ ಮಾಡುತ್ತಿದೆ ಎಂದು ಹೋರಾಟ ಮಾಡುವ ಕುರಿತು ಚರ್ಚೆ ನಡೆಸಲಾಯಿತು.
ರಾಜ್ಯ ಸರ್ಕಾರ ಕೊರೋನ ರೋಗಿಗಳ ಬದುಕಿಸಲು ವೆಂಟಿಲೇಟರ್ ಹಾಗೂ ಆಕ್ಸಿಜೆನ್ ಬಾಕ್ಸ್ ಒದಗಿಸುವ ಅವಶ್ಯಕತೆಯಿದೆ. ವೆಂಟಿಲೇಟರ್, ಆಕ್ಸಿಜನ್ ಕಿಟ್ , ಸಿಬ್ಬಂದಿಗಳು ಖಾಸಗಿ ಆಸ್ಪತ್ರೆಯಲ್ಲಿಯು ಕಡಿಮೆ ಇದ್ದಾರೆ. ಹಾಗೆ ಕೊರೋನ ನಿಯಂತ್ರಣಕ್ಕೆ ಯಾವ ರೀತಿಯಲ್ಲಿ ಕ್ರಮ ಕೈಗೊಳ್ಳಬಹುದು ಎಂಬ ಬಗ್ಗೆ ಚರ್ಚೆ ನಡೆಸಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಹೇಳಿಕೆ
ತಮಿಳುನಾಡು ಸರ್ಕಾರ 4 ಲಕ್ಷ 80 ಸಾವಿರಕ್ಕೆ ವೆಂಟಿಲೇಟರ್ ಖರೀದಿ ಮಾಡಿದೆ. ಆದರೆ, ನಮ್ಮ ಸರ್ಕಾರ 18 ಲಕ್ಷಕ್ಕೆ ಖರೀದಿ ಮಾಡಿದೆ. ಬಿಬಿಎಂಪಿ ಆಯುಕ್ತರನ್ನ ವರ್ಗಾವಣೆ ಮಾಡಲಾಗಿದೆ. ಅವ್ಯವಹಾರವನ್ನ ಮುಚ್ಚಿಹಾಕುವ ಪ್ರಯತ್ನ ಮಾಡ್ತಿದೆ. ಕೂಡಲೇ ಇದರ ಬಗ್ಗೆ ತನಿಖೆ ನಡೆಸಬೇಕು. ಬೆಡ್ ಗಳ ಕೊರತೆ ಕೂಡ ಹೆಚ್ಚಾಗಿದೆ. ಇದನ್ನ ನಿವಾರಿಸುವ ಕೆಲಸ ಮಾಡಬೇಕು. ಸರ್ಕಾರ ಎಲ್ಲದರಲ್ಲೂ ಅವ್ಯವಹಾರವನ್ನ ನಡೆಸ್ತಿದೆ ಎಂದು ಸರ್ಕಾರದ ವಿರುದ್ಧ ಸಲೀಂ ಅಹ್ಮದ್ ಆಕ್ರೋಶವ್ಯಕ್ತಪಡಿಸಿದರು.