ಮಹಾನಗರ ಪಾಲಿಕೆ ಆಸ್ತಿ ತೆರಿಗೆ- ಅವಧಿ ವಿಸ್ತರಣೆಗೆ ಉಳ್ಳಾಗಡ್ಡಿಮಠ ಮನವಿ
1 min readಹುಬ್ಬಳ್ಳಿ: ಕೋವಿಡ್ ಸೋಂಕಿನ ಕಾರಣದಿಂದ ಹುಬ್ಬಳ್ಳಿ ಧಾರವಾಡ ಮಹಾನಗರದ ಎಲ್ಲ ವರ್ಗದ ನಿವಾಸಿಗಳು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದು, ಆಸ್ತಿ ತೆರಿಗೆ ಪಾವತಿಯ ಅವಧಿಯನ್ನು ಮೂರು ತಿಂಗಳ ಕಾಲ ವಿಸ್ತರಿಸಲು ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಮತ್ತು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಯುಕ್ತರು ಹಾಗೂ ಆಡಳಿತಾಧಿಕಾರಿಗಳಲ್ಲಿ ಕಾಂಗ್ರೆಸ್ ಮುಖಂಡ ರಜತ ಉಳ್ಳಾಗಡ್ಡಿಮಠ ಮನವಿ ಮಾಡಿಕೊಂಡಿದ್ದಾರೆ.
ಮನವಿ ಇಂತಿದೆ..
ಮಾನ್ಯರೆ,
ಹುಬ್ಬಳ್ಳಿ ಧಾರವಾಡ ಮಹಾನಗರದಲ್ಲಿನ ಆಸ್ತಿ ತೆರಿಗೆಯನ್ನು ಪಾವತಿಸಲು ಪ್ರತಿ ವರ್ಷದಂತೆ ಏಪ್ರಿಲ್ 30 ಕೊನೆಯ ದಿನಾಂಕವಾಗಿರುತ್ತದೆ ಪ್ರತಿ ವರ್ಷ ಏಪ್ರಿಲ್ 30 ರೊಳಗೆ ಪವತಿಸುವವರಿಗೆ ಶೇ5 ರಷ್ಟು ರಿಯಾಯಿತಿ ಸಹ ನೀಡಲಾಗುತ್ತಿರುತ್ತದೆ ಆದರೆ ಕಳೆದ ವರ್ಷದಿಂದ ಕೋವಿಡ್ ಸೊಂಕಿನ ಕಾರಣ ಮಹಾನಗರದ ಎಲ್ಲ ವರ್ಗದ ಜನಸಾಮಾನ್ಯರ ಮೇಲೆ ತೀವ್ರ ಪರಿಣಾಮ ಬೀರಿದ್ದು ಆರ್ಥಿಕ ಸಂಕಷ್ಟಕ್ಕೆ ಒಳಗಿಗಿರುತ್ತಾರೆ ಅಲ್ಲದೆ ಈಗ ಪ್ರಸ್ತುತ ಕೋವಿಡ್ ಎರಡನೇ ಅಲೆಯ ಕಾರಣ ಕಳೆದ ಎರಡು ತಿಂಗಳಿಂದಲೂ ಸಹ ವ್ಯಾಪಾರ ವಹಿವಾಟು ಸಮರ್ಪಕವಾಗಿ ನಡೆಯದೆ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುತ್ತಾರೆ ಇದರಿಂದ ಪ್ರತಿ ವರ್ಷ ಪವತಿಸಬೇಕಾಗಿರುವ ಅಸ್ತಿ ತೆರಿಗೆಯನ್ನು ಪಾವತಿಸಲು ನಿಗಧಿಪಡಿಸಲಾಗಿರುವ ದಿನಕವನ್ನು ಮುರೂ ತಿಂಗಳವರೆಗೆ ವಿಸ್ತರಿಸಿ ತೆರಿಗೆ ಪಾವತಿಸಲು ಅವಕಾಶ ಮಾಡಿಕೊಡಬೇಕೆಂದು ಈ ಮೂಲಕ ಕೋರುತ್ತೇನೆ ಇದರಿಂದ ಹುಬ್ಬಳ್ಳಿ ಧಾರವಾಡ ಮಹಾನಗರದಲ್ಲಿನ ಎಲ್ಲ ವರ್ಗದ ಜನರಿಗೆ ಅನುಕೂಲವಾಗುವುದು ಅದರಿಂದ ಅಸ್ತಿ ತೆರಿಗೆ ಪಾವತಿಸಲು ನಿಗಧಿಪಡಿಸಿರುವ ದಿನಾಂಕವನ್ನು ಮೂರು ತಿಂಗಳಲವರೆಗೆ ವಿಸ್ತರಿಸಲು ಸಂಬದ್ಧಪಟ್ಟವರಿಗೆ ಸೂಕ್ತ ಆದೇಶ ನೀಡಬೇಕೆಂದು ಈ ಮೂಲಕ ಮತ್ತೊಮ್ಮೆ ವಿನಂತಿಸಿಕೊಳ್ಳುತ್ತೇನೆ
ಗೌರವಗಳೊಂದಿಗೆ
ತಮ್ಮ ವಿಶ್ವಾಸಿ
ರಜತ್ ಉಳ್ಳಾಗಡ್ಡಿಮಠ