ಗರಗ ಪಿಎಸೈ ಅಮಾನತ್ತು ಮಾಡಿ: ಅತ್ಯಾಚಾರಿಗಳನ್ನ ಗಲ್ಲಿಗೇರಿಸಿ- ಕಾಂಗ್ರೆಸ್ ಬೃಹತ್ ಪ್ರತಿಭಟನೆ
ಧಾರವಾಡ: ಧಾರವಾಡ ತಾಲೂಕಿನ ಬೋಗುರ ಗ್ರಾಮದ ಪೂಜಾ ಕಂಚಿಮಠ ಹಾಗೂ ಮಾಧನಭಾವಿ ಗ್ರಾಮದ ವಿದ್ಯಾಶ್ರೀ ಕಳಲಿ ಎಂಬ ಅಪ್ರಾಪ್ತ ವಿದ್ಯಾರ್ಥಿಗಳ ಮೇಲೆ ಅತ್ಯಾಚಾರವೆಸಗಿದವರನ್ನ ಗಲ್ಲಿಗೇರಿಸುವಂತೆ ಧಾರವಾಡ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಸಮಿತಿ ಆಗ್ರಹಿಸಿ ಪ್ರತಿಭಟನೆ ನಡೆಸಿತು.
ಧಾರವಾಡ ತಾಲೂಕಿನ ಬೋಗೂರ ಗ್ರಾಮದ ಕುಮಾರಿ, ಪೂಜಾ ಕಂಬಿಮಠ ದೇವಸ್ಥಾನಕ್ಕೆ ಹೋಗಿ ಬರುವಾಗ ಬಶೀರ್ ಎಂಬಾತ ಅತ್ಯಾಚಾರವೆಸಗಿದ್ದಾನೆ . ಅದಕ್ಕೆ ಮನನೊಂದು ಪೂಜಾ ಕಂಚಿಮಠ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ . ಮಾಧನಭಾವಿ ಗ್ರಾಮದ ವಿದ್ಯಾ ಕಳಲಿ ಮನೆಯ ಹತ್ತಿರ ಹೊಲದ ಮರದ ಕೆಳಗೆ 10 ನೇ ತರಗತಿಯ ಪರೀಕ್ಷೆಯ ಕುರಿತು ಅಭ್ಯಾಸ ಮಾಡುತ್ತಿರುವಾಗ ಕಿಡಿಗೇಡಿಗಳಾದ ಬಸವರಾಜ ಕೇರಾಳಿ ಎಂಬಾತ ಅತ್ಯಾಚಾರ ಎಸಗಿ, ತಾನಾಗಿಯೇ ಒತ್ತಾಯ ಮಾಡಿ ವಿಷವನ್ನು ಕೂಡಾ ಕುಡಿಸಿ ಸಾಯಿಸಿದ್ದಾನೆ ಎಂದು ಪ್ರತಿಭಟನೆ ನಡೆಸುತ್ತಿದ್ದವರು ಹೇಳಿದರು.
ವಿದ್ಯಾಶ್ರೀ ತಂದೆ ಗರಗ ಪೋಲಿಸ್ ಠಾಣೆಗೆ ದೂರು ನೀಡಲು ಹೋದಾಗ ಪಿ.ಎಸ್.ಐ ಪ್ರಸಾದ ಪಾಳೇಕರ ಹಾಗೂ ಸಿಬ್ಬಂಧಿಯವರು ಬೆಳಿಗ್ಗೆಯಿಂದ ಸಂಜೆಯವರೆಗೂ ನೋಂದ ವಿದ್ಯಾರ್ಥಿಯ ತಂದೆಯನ್ನು ಸ್ಥಳೀಯ ರಾಜಕೀಯ ಒತ್ತಡಕ್ಕೆ ಮಣಿದು ದೂರು ದಾಖಲಿಸಿಕೊಳ್ಳದೇ ಹೋದವರ ಮೇಲೆನೇ ಧೌರ್ಜನ್ಯ ವೆಸಗಿದ್ದಾರೆ. ಹಾಗಾಗಿ ಕೂಡಲೇ ಗರಗ ಪೋಲಿಸ್ ಠಾಣೆಯ ಪಿ.ಎಸ್.ಐ ಪ್ರಸಾದ ಘಾನೇಕರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿಬೇಕು ಆಗ್ರಹಿಸಿದರು.
ಜಿಲ್ಲಾ ಮಹಿಳಾ ಕಾಂಗ್ರೇಸ್ ಘಟಕದ ಅಧ್ಯಕ್ಷೆ ಶಾಂತಮ್ಮ ಗುಜ್ಜಳ, ಜಿಪಂ ಅಧ್ಯಕ್ಷೆ ವಿಜಯಲಕ್ಷ್ಮಿ ಪಾಟೀಲ್, ದೀಪಾ ಗೌರಿ, ಗೌರಮ್ಮ ನಾಡಗೌಡ, ತಾಪಂ ಅಧ್ಯಕ್ಷ ರವಿ ವರ್ಮ ಪಾಟೀಲ, ಸುರೇಕಾ ಮೆದಾ, ನಿಮ೯ಲಾ ಹೊಂಗಲ, ಸರೊಜಾ ಪಾಟಿಲ, ಶ್ರೀನಿವಾಸ ಮಾನೆ, ಅನಿಲ ಕುಮಾರ ಪಾಟೀಲ್, ನಾಗರಾಜ ಗೌರಿ, ಸತೀಶ ತುರಮರಿ, ಉಳವಯ್ಯ ಚಿಕ್ಕೊಪ್ಪ, ಕರಿಯೆಪ್ಪ ಮಾದರ, ಚನ್ನಬಸಪ್ಪ ಮಟ್ಟಿ, ಯಾಶೀನ ಹಾವೇರಿಪೇಟ, ನವೀನ ಕದಂ, ಆನಂದ ಸಿಂಗನಾಥ, ಸಿದ್ದಣ್ಣ ಸಪೂರಿ, ಪ್ರಕಾಶ ಭಾವಿಕಟ್ಟ, ಶಿವಾನಂದ ಗಿರಿಯೆಪ್ಪನ್ನವರ, ಮಂಜುನಾಥ ಕಾಮಕರ , ಬಸವರಾಜ ಜಾಧವ, ಶ್ರೀದರ ಶೆಟ್ಟಿ, ವಸಂತ ಅಕಾ೯ಚಾರ, ಆನಂದ ಮುಶಣ್ಣವರ, ವಿಠ್ಠಲ ಪಿರಗಾರ, ಮುತ್ತು ಕೋಟೂರ, ಹನುಮಂತ ಕೊರವರ, ಪ್ರಕಾಶ ಘಾಟಗೆ, ಮಹೇಶ ಹುಲ್ಲಣ್ಣರ ಸೇರಿದಂತೆ ಹಲವರು ಭಾಗವಹಿಸಿದ್ದರು.