Posts Slider

Karnataka Voice

Latest Kannada News

ಹತ್ರಾಸ್ ಕಾಮುಕರನ್ನ ಗಲ್ಲಿಗೇರಿಸಿ: ಕಾಂಗ್ರೆಸ್ ಪ್ರತಿಭಟನೆ

1 min read
Spread the love

ಹುಬ್ಬಳ್ಳಿ: ಉತ್ತರಪ್ರದೇಶದ ಹತ್ರಾಸನಲ್ಲಿ ನಡೆದ ಯುವತಿಯ ಅತ್ಯಾಚಾರ ಪ್ರಕರಣದ ಆರೋಪಿಗಳನ್ನ ಗಲ್ಲಿಗೇರಿಸುವಂತೆ ಆಗ್ರಹಿಸಿ ಧಾರವಾಡ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪರಿಶಿಷ್ಟ ಜಾತಿ ಘಟಕ ಹಾಗೂ ಹು-ಧಾ ಮಹಾನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ಪರಿಶಿಷ್ಟಜಾತಿ ಘಟಕ ಪ್ರತಿಭಟನೆ ನಡೆಸಿತು.

ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ನಡೆದ ದಲಿತ ಯುವತಿಯ ಮೇಲೆ ಅತ್ಯಾಚಾರ ಮಾಡಿದ ಕಾಮುಕರನ್ನು ಗಲ್ಲಿಗೇರಿಸಿ, ಉತ್ತರ ಪ್ರದೇಶದ ಸರ್ಕಾರವನ್ನು ವಜಾಗೊಳಿಸಿ ರಾಷ್ಟಪತಿ ಆಳ್ವಿಕೆ ಜಾರಿಗೊಳಿಸುವ ಮೂಲಕ ಮನಿಷಾ ವಾಲ್ಮೀಕಿ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡಬೇಕೆಂದು ಆಗ್ರಹಿಸಿದರು.

ಹುಬ್ಬಳ್ಳಿಯ ರೈಲ್ವೆ ಸ್ಟೇಷನ್ ಹತ್ತಿರವಿರುವ ಅಂಬೇಡ್ಕರ್  ಸರ್ಕಲ್ ನಿಂದ  ತಹಶೀಲ್ದಾರ್ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ಮೂಲಕ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ತಹಶೀಲ್ದಾರ ಮೂಲಕ ಮನವಿ ಪತ್ರವನ್ನು ಸಲ್ಲಿಸಿದರು.

ಧಾರವಾಡ ಜಿಲ್ಲಾಧ್ಯಕ್ಷ ಅನಿಲಕುಮಾರ್ ಪಾಟೀಲ್, ರಾಜ್ಯ ಎಸ್.ಸಿ, ಎಸ್.ಟಿ ಘಟಕದ ಅಧ್ಯಕ್ಷ  ಎಫ್.ಎಚ್.ಜಕ್ಕಪ್ಪನವರ್, ಸದಾನಂದ ಡಂಗನವರ್, ಗ್ರಾಮೀಣ ಜಿಲ್ಲಾ ಹಾಗೂ ಹು-ಧಾ ಮಹಾನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ಎಸ್.ಟಿ ಘಟಕಗಳ ಅಧ್ಯಕ್ಷ ಶಂಕರ್ ಹೊಸಮನಿ, ಆನಂದ್ ಮುಶನ್ನವರ್, ಶಾಕಿರ್ ಸನದಿ, ಬಾಬಾಜಾನ್ ಮುಧೋಳ, ಸಾಗರ ಹಿರೇಮನಿ, ಅಬ್ದುಲ್ ಗಣಿ, ಅಕ್ಕಮ್ಮ ಕಂಬಳಿ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.


Spread the love

Leave a Reply

Your email address will not be published. Required fields are marked *

You may have missed