ಧಾರವಾಡದಲ್ಲಿ ಕಾಂಗ್ರೆಸ್ ಮುಖಂಡನಿಂದ “ಪಾಲಿಕೆ ಸದಸ್ಯೆ ಮಗನ ಮೇಲೆ” ಹಲ್ಲೆ….
1 min readಧಾರವಾಡ: ಇತ್ತೀಚೆಗೆ ನಡೆದ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಅಲ್ಪ ಮತದಿಂದ ಗೆದ್ದಿರುವ ಸದಸ್ಯೆಯ ಮಗನೋರ್ವನನ್ನ “ನಾಮೀ” ಕಾಂಗ್ರೆಸ್ ಮುಖಂಡನೋರ್ವ ಹಿಗ್ಗಾ ಮುಗ್ಗಾ ಥಳಿಸಿರುವ ಘಟನೆ ನಡೆದಿದೆ.
ಧಾರವಾಡ ಜಿಲ್ಲೆಯ ಪ್ರಮುಖ ರಾಜಕಾರಣಿಯ ಜೊತೆ ಸಂಪರ್ಕ ಹೊಂದಿರುವ ಪಾಲಿಕೆ ಸದಸ್ಯೆಯ ಮಗ, ಬಟ್ಟೆ ಹರಿಸಿಕೊಳ್ಳುವ ಹಾಗೇ ಬಡಿಸಿಕೊಂಡಿದ್ದಾನೆ. ಆದರೂ, ಭಯದಿಂದ ಪೊಲೀಸ್ ಠಾಣೆಗೆ ದೂರು ನೀಡಿಲ್ಲ.
ಧಾರವಾಡ ನಗರದಲ್ಲಿ ತಮ್ಮದೇ ಛಾಪು ಮೂಡಿಸಿಕೊಂಡಿರುವ ಕಾಂಗ್ರೆಸ್ ಮುಖಂಡ, ತನ್ನನ್ನು ಹೊರತುಪಡಿಸಿ ಬೇರೆಯವರೊಂದಿಗೆ ಸಂಪರ್ಕ ಹೊಂದಿರುವ ಬಗ್ಗೆ ಸಂಕಟದಿಂದ ಹೀಗೆ ಮಾಡಿದ್ದಾನೆಂದು ಗೊತ್ತಾಗಿದೆ.
ಮಹಾನಗರ ಪಾಲಿಕೆಗೆ ಮಹಿಳಾ ಸದಸ್ಯೆಯನ್ನಾಗಿ ಮಾಡುವಲ್ಲಿ ಹೊಡೆದಿರುವ ಮುಖಂಡನ ಕೈಯಿದೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ, ಧೋ ನಂಬರ ದಂಧೆ ಮಾಡುತ್ತಿದ್ದವನ ತಾಯಿ ಪಾಲಿಕೆ ಸದಸ್ಯೆಯಾದ ತಕ್ಷಣವೇ, ಚಿಕನ್ ವ್ಯಾಪಾರಿ ಬೇರೆಯವರ ಬಳಿ ಹೋಗಿ, ತನ್ನ ಛಾಪು ಮೂಡಿಸುವ ಯತ್ನ ಮಾಡಿದ್ದೆ ಹೊಡೆಸಿಕೊಳ್ಳಲು ಕಾರಣವೆನ್ನಲಾಗಿದೆ.
ಅಂಗಿ ಹರಿಯುವ ಹಾಗೇ ಹೊಡೆದಿರುವ ಮುಖಂಡ ಸಮಾಜವನ್ನ ಬಿಂಬಿಸುವಂತನಾಗಿದ್ದಾನೆ. ಅಷ್ಟೇ ಅಲ್ಲ, ಆ ಸಮಾಜದ ಬಹುತೇಕರು ಆತನ ಮನೆ ಬಾಗಲಿಗೆ ಹೋಗೆ ಹೋಗಿರುತ್ತಾರೆ. ಆದರೆ, ಹೊಡೆಸಿಕೊಂಡವ ಪೊಲೀಸ್ ಠಾಣೆಗೂ ಹೋಗದಷ್ಟು ದುರ್ಬಲನೇ ಎಂಬುದೀಗ ಉಳಿದಿರುವ ಪ್ರಶ್ನೆ.