ಕಾಂಗ್ರೆಸ್ ಮುಖಂಡನಿಗೆ ಡೆಡ್ ಲೈನ್ ಕೊಟ್ಟ ಅನಾಮಧೇಯ ವ್ಯಕ್ತಿ: ಕ್ಯಾರೇ ಎನ್ನದ ಪೊಲೀಸರು

ದಾವಣಗೆರೆ: ಸತತ ನಾಲ್ಕು ಪತ್ರ ಬರೆದು ಜೀವ ಬೆದರಿಕೆಯನ್ನ ಅನಾಮಧೇಯ ವ್ಯಕ್ತಿಯೋರ್ವ ಕೆಪಿಸಿಸಿ ಕಾರ್ಯದರ್ಶಿ ಹಾಗೂ ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಡಿ.ಬಸವರಾಜಗೆ ಹಾಕಿದ್ದು, ಪೊಲೀಸರು ಯಾವುದೇ ಕ್ರಮ ಜರುಗಿಸದೇ ಇರುವುದು ಸಾರ್ವಜನಿಕರಲ್ಲಿ ಸೋಜಿಗ ಮೂಡಿಸಿದೆ.
ಡಿ. ಬಸವರಾಜ್ ಅವರ ದಾವಣಗೆರೆ ಮನೆಗೆ ಪತ್ರ ಬರೆದು ಬೆದರಿಕೆ ಹಾಕಲಾಗುತ್ತಿದೆ. ಸಾವರ್ಕರ್ ವಿರುದ್ದ ಸುದ್ದಿಗೋಷ್ಠಿ ಮಾಡಿದಕ್ಕೆ ಜೀವ ಪತ್ರ ಬರೆದು ಬೆದರಿಸಲಾಗುತ್ತಿದೆ. ಸಾವರ್ಕರ್ ವಿರುದ್ಧ ನೀಡಿದ್ದ ಹೇಳಿಕೆ ವಾಪಸ್ಸು ಪಡೆದು ಕ್ಷಮೆ ಕೇಳುವಂತೆ ಪತ್ರದಲ್ಲಿ ಆಗ್ರಹಿಸಲಾಗಿದ್ದು, ಇದೇ 28 ರೊಳಗೆ ಕ್ಷಮೆ ಕೇಳದಿದ್ದರೆ ಸರಿ ಇರಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಪೊಲೀಸರ ಮೌನ-ಸಾರ್ವಜನಿಕರಲ್ಲಿ ಆಕ್ರೋಶ
ಈ ಹಿಂದೆ ಮೂರು ಪತ್ರಗಳು ಹಾಗೂ ಎರಡು ಪೋನ್ ಕಾಲ್ ಮೂಲಕ ಬೆದರಿಕೆ ಹಾಕಲಾಗಿದೆ. ಬಡಾವಣೆ ಪೊಲೀಸ್ ಠಾಣೆಗೆ ಈ ಬಗ್ಗೆ ದೂರು ನೀಡಲಾಗಿದೆ. ಎಸ್ಪಿ ಎಎಸ್ಪಿ ಅವರಿಗೂ ದೂರ ನೀಡಲಾಗಿದೆಯಾದರೂ ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಡಿ.ಬಸವರಾಜ್ ಆರೋಪಿಸಿದ್ದಾರೆ.