Posts Slider

Karnataka Voice

Latest Kannada News

ಕಾಂಗ್ರೆಸ್  ವಾಟ್ಸಾಪ್ ಗ್ರೂಪ್: ಕಾನೂನು ಕ್ರಮಕ್ಕೆ ಸಿಟಿ ರವಿ ಮನವಿ

1 min read
Spread the love

ಬೆಂಗಳೂರು: ಇತರೆ ಮಂತ್ರಿಗಳ ವಿರುದ್ದ ಅವಮಾನಕಾರಿ ಫೋಸ್ಟ್ ಹಾಕುತ್ತಿರುವವರ ವಿರುದ್ದ ಕ್ರಮಗೊಳ್ಳಬೇಕು. ಕಾಂಗ್ರೆಸ್ ಪಕ್ಷದ ಗ್ರೂಫ್ ಅದನ್ನ ಮಾಡುತ್ತಿದೆ. ಹೀಗಾಗಿ ಅವರ ವಿರುದ್ಧ ಕ್ರಮ ಜರುಗಿಸುವಂತೆ ಗೃಹ ಸಚಿವರಿಗೆ ದೂರ ನೀಡುವುದಾಗಿ ಸಿ ಟಿ ರವಿ ಹೇಳಿದರು.

ಪ್ರಧಾನ ಮಂತ್ರಿ ನಿಧನರಾಗಿರುವ ರೀತಿ ದೇವೇಗೌಡರು  ಹಾರ ಹಾಕಿರುವ ರೀತಿ ಪೋಟೋ ಪೋಸ್ಟ್ ಮಾಡಿದ್ದಾರೆ. ಈ ಬಗ್ಗೆ ಗೃಹ ಸಚಿವರಿಗೆ ದೂರ ನೀಡಿತ್ತಿದ್ದೇನೆ. ಸಾರ್ವಜನಿಕ ಸಭ್ಯತೆ ಇರ್ಬೇಕು. ಇದು ಬ್ಲಾಕ್ ಕಾಂಗ್ರೆಸ್ ನವರಿಂದ ಆಗಿದೆ ಎಂದು ಸಿ ಟಿ ರವಿ ಆರೋಪಿಸಿದರು.

ನಾನು ಇದ್ದ ವಾಹನ ಅಪಘಾತ ಅದಾಗಲೇ ನಾನು ಪ್ರತಿಕ್ರಿಯೆ ಕೊಟ್ಟಿದ್ದೆ. ಪದೇ ಪದೇ ನನ್ನ ಹೆಸರು, ಫೋಟೋ ದುರ್ಬಳಕೆ ಮಾಡುತ್ತಿದ್ದಾರೆ. ರಾಜಕೀಯದಲ್ಲಿ  ಮಾಡುವುದು ಸಹಜ. ಆದ್ರೆ, ಟೀಕೆ ಕೆಟ್ಟ  ಶಬ್ದಗಳಿಂದ ಮಾಡ್ಬಾರ್ದು. ಕಾಂಗ್ರೆಸ್ ಪಕ್ಷದ ಮುಖಂಡರು ಕ್ರಮ ಕೈಗೊಳ್ಳಬೇಕು. ನಾನು ಸಹ  ಗೃಹ ಸಚಿವರಿಗೆ  ದೂರ ನೀಡುತ್ತೇನೆ ಎಂದರು.


Spread the love

Leave a Reply

Your email address will not be published. Required fields are marked *

You may have missed