ಹು-ಧಾ ಇತಿಹಾಸದಲ್ಲೇ ಬಹು ದೊಡ್ಡ ಇಸ್ಪೀಟ್ ರೇಡ್: ತವನಪ್ಪ ಅಷ್ಟಗಿ- ಇಸ್ಮಾಯಿಲ ತಮಾಟಗಾರ ಸೇರಿ ಹಲವರ ಬಂಧನ- ಸಿಕ್ಕ ಮಾಲೆಷ್ಟು ಗೊತ್ತಾ..
ಧಾರವಾಡ: ಅವಳಿನಗರದ ಇತಿಹಾಸದಲ್ಲೇ ಬಹುದೊಡ್ಡ ಇಸ್ಪೀಟ್ ರೇಡ್ ನಡೆದಿದ್ದು, ಅವಳಿನಗರದ ಘಟನಾಘಟಿ ಪಂಟರುಗಳು ಸಿಕ್ಕಿಬಿದ್ದಿದ್ದು, ಪೊಲೀಸ್ ವರಿಷ್ಠಾಧಿಕಾರಿಯೂ ಆಗಿರುವ ಡಿಸಿಪಿ ಪಿ.ಕೃಷ್ಣಕಾಂತ ನೇತೃತ್ವದಲ್ಲಿ ದಾಳಿ ನಡೆದಿದೆ.
ದಾಳಿಯಲ್ಲಿ 56 ಜನರು ಸಿಕ್ಕಿಬಿದಿದ್ದು ಇದರಲ್ಲಿ ಬಿಜೆಪಿ ಮುಖಂಡ ತವನಪ್ಪ ಅಷ್ಟಗಿ, ಕಾಂಗ್ರೆಸ್ ಮುಖಂಡ ಇಸ್ಮಾಯಿಲ ತಮಾಟಗಾರ, ಹೊಟೇಲ್ ಸಂಘದ ಮಹೇಶ ಶೆಟ್ಟಿ, ಹವಾಲಾ ಕುಳ ಸಮುಂದರಸಿಂಗ್ ಸೇರಿದಂತೆ ಹಲವು ನಾಮಿ ಜನರು ಸಿಕ್ಕಿಬಿದ್ದಿದ್ದಾರೆ.
ಧಾರವಾಡ ನಗರದ ಹೊರವಲಯದಲ್ಲಿರುವ ರಮ್ಯ ರೆಸಿಡೆನ್ಸಿಯಲ್ಲಿ ನಡೆಯುತ್ತಿದ್ದ ಅಂದರ್-ಬಹಾರ್ ಆಡುತ್ತಿದ್ದ. ಬಂಧಿತರಿಂದ 49 ಲಕ್ಷ ರೂಪಾಯಿ, 34 ವಾಹನಗಳು ಹಾಗೂ 66 ಮೊಬೈಲಗಳನ್ನ ವಶಕ್ಕೆ ಪಡೆಯಲಾಗಿದೆ. ಇದರಲ್ಲಿ ಪ್ರಮುಖವಾಗಿ ಹವಾಲಾ ಕುಳ ಸಮುಂದರಸಿಂಗ್, ಇಸ್ಮಾಯಿಲ ತಮಾಟಗಾರ, ಮಹೇಶ ಶೆಟ್ಟಿ, ತವನಪ್ಪ ಅಷ್ಟಗಿ ಸೇರಿದಂತೆ 56 ಜನರನ್ನ ಬಂಧನ ಮಾಡಿ, ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಎಸ್ಪಿ ಪಿ.ಕೃಷ್ಣಕಾಂತ ಹೇಳಿದರು.
ತವನಪ್ಪ ಅಷ್ಟಗಿಯವರ ಪಕ್ಷ ಬಿಜೆಪಿಯಾದರೇ, ತಮಾಟಗಾರ ಪಕ್ಷ ಕಾಂಗ್ರೆಸ್. ಪಕ್ಷದ ಚಟುವಟಿಕೆಗಳು ನಡೆಯುತ್ತಿದ್ದಾಗ ಹೀಗೆಳೆದುಕೊಳ್ಳುವ ಇವರು ಅಂದರ್-ಬಹಾರನಂತ ಕೆಟ್ಟ ಆಟಗಳಲ್ಲಿ ಒಂದಾಗಿ, ಪೊಲೀಸರ ಬಲೆಗೆ ಬಿದ್ದಿರುವುದು ಕಾಕತಾಳೀಯ. ಬಂಧಿತರಲ್ಲಿ ಕೆಲವರನ್ನ ಪೊಲೀಸ್ ಹೆಡ್ ಕ್ವಾಟರ್ಸನಲ್ಲಿರುವ ದುರ್ಗಾದೇವಿ ದೇವಸ್ಥಾನದಲ್ಲಿಡಲಾಗಿದೆ.
ಈ ಘಟನೆಯನ್ನ ಹೊರತುಪಡಿಸಿ ಅವಳಿನಗರದಲ್ಲಿ ಹತ್ತಕ್ಕೂ ಹೆಚ್ಚು ಪ್ರಕರಣ ದಾಖಲು ಮಾಡಿ, ಲಕ್ಷಾಂತರ ರೂಪಾಯಿ ವಶಕ್ಕೆ ಪಡೆಯಲಾಗಿದ್ದು, ಹಲವರನ್ನ ಬಂಧನ ಮಾಡಿ ಕ್ರಮ ಜರುಗಿಸಲಾಗಿದೆ ಎಂದು ಕೃಷ್ಣಕಾಂತ ಹೇಳಿದ್ದಾರೆ.
ಯಾವುದೇ ಮುಲ್ಲಾಜಿಲ್ಲದೇ ಕಾರ್ಯನಿರ್ವಹಿಸುತ್ತಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ, ಎಲ್ಲರ ಮೆಚ್ಚುಗೆಗೆ ಕಾರಣವಾಗಿದ್ದಾರೆ. ಮೊನ್ನೆಯಷ್ಟೇ ಜೂಜಾಟದ ಮೇಲೆ ದಾಳಿ ಮಾಡಿ ಹನ್ನೊಂದು ಪೊಲೀಸರು ನಾಪತ್ತೆಯಾಗಿದ್ದನ್ನ ಇಲ್ಲಿ ಸ್ಮರಿಸಬಹುದು.