ಕಾಂಗ್ರೆಸ್ ಮುಖಂಡ ಸೇರಿ ಮೂವರ ಬಂಧನ: ನವನಗರದಲ್ಲಿ “353”- ರೌಡಿ ಷೀಟರ್ ಜೊತೆಗೆ ಹಾಕ್ಯಾಟ್- ಪೊಲೀಸರಿಗೂ ಧಮ್ಕಿ
1 min readಸವದತ್ತಿ ಮೂಲದ ಕಾಂಗ್ರೆಸ್ ಮುಖಂಡ ನವನಗರ ನಿವಾಸಿ
ಹುಬ್ಬಳ್ಳಿ: ಸಾರ್ವಜನಿಕ ಸ್ಥಳದಲ್ಲಿ ರೌಡಿ ಷೀಟರನೊಂದಿಗೆ ಕಾದಾಟ ಮಾಡುತ್ತಿದ್ದ ಸಮಯದಲ್ಲಿ ಬಿಡಿಸಲು ಹೋದವರಿಗೆ ಧಮಕಿ ಹಾಕಿದ ಪ್ರಕರಣ ನವನಗರದ ಕರ್ನಾಟಕ ವೃತ್ತದ ಬಳಿ ಸಂಭವಿಸಿದ್ದು, ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲು ಮಾಡಿಕೊಂಡು, ಮೂವರನ್ನ ಬಂಧನ ಮಾಡಿದ್ದಾರೆ.
ಎಕ್ಸಕ್ಲೂಸಿವ್ ವೀಡಿಯೋ
https://www.youtube.com/watch?v=KtEpGDkqdF4
ನವನಗರದ ರೌಡಿ ಷೀಟರ್ ಪ್ರವೀಣ ಪೂಜಾರಿ, ಸವದತ್ತಿ ಮೂಲದ ಕಾಂಗ್ರೆಸ್ ಮುಖಂಡ ಮಲ್ಲಯ್ಯ ಹಿರೇಮಠ ಹಾಗೂ ವಿನೋದ ಪಾಟೀಲ ಮೂವರ ನಡುವೆ ಹಣಕಾಸಿನ ವ್ಯವಹಾರವಿತ್ತು. ಈ ಸಂಬಂಧವಾಗಿ ಗೊಂದಲವಾಗಿತ್ತು. ವಿನೋದ ಪಾಟೀಲನಿಂದ ಹಣ ಪಡದಿದ್ದ ಮಲ್ಲಯ್ಯ ಹಿರೇಮಠ ಎದುರಿಗೆ ಭೇಟಿಯಾದಾಗ, ಜಗಳಕ್ಕೆ ಇಳಿದಿದ್ದ.
ಈ ಘಟನೆ ನಡೆಯುತ್ತಿದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರಿಗೂ ಧಮಕಿ ಹಾಕಲಾಗಿದೆ. ಅಷ್ಟೇ ಅಲ್ಲ, ಗಲಾಟೆಯನ್ನ ಕಡಿಮೆ ಮಾಡಲು ಹೋದಾಗ, ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಸ್ವ ಮೋಟೋ ಕೇಸ್ ದಾಖಲು ಮಾಡಲಾಗಿದೆ.
ಗಲಾಟೆಯನ್ನ ಕಡಿಮೆ ಮಾಡಲು ಹೋದಾಗ, ಕಾಂಗ್ರೆಸ್ ಮುಖಂಡ ಯಾವ ಥರ ನಡೆದುಕೊಂಡ ಎಂಬ ವೀಡಿಯೋ ವೈರಲ್ ಆಗಿದ್ದು, ರೌಡಿ ಷೀಟರ್ ಜೊತೆಗಿನ ಈತನ ವ್ಯವಹಾರ ಎಂತಹದು ಎಂಬ ಸಂಶಯ ಮೂಡಿದೆ.
ಈಗಾಗಲೇ ರೌಡಿ ಷೀಟರ್ ಪ್ರವೀಣ ಪೂಜಾರಿ ಮತ್ತು ಕಾಂಗ್ರೆಸ್ ಮುಖಂಡ ಮಲ್ಲಯ್ಯ ಹಾಗೂ ವಿನೋದ ಪಾಟೀಲ ಬಂಧನ ಮಾಡಿ, ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.