“ಚೆನ್ನಾಗಿ ಬರಿತೇನಿ” ಅನ್ನೋ ಕಾನ್ಪಿಡೆನ್ಸ್‌ನಲ್ಲಿ SSLC ಪರೀಕ್ಷೆ ಹಾಲ್ ಒಳಗಡೆ ಹೆಜ್ಜೆಯಿಡಿ- ಗೆಲುವು ನಿಮ್ಮದಾಗತ್ತೆ….!!!

ಧಾರವಾಡ: ನಿಮಗೆ ನೀವೇ ದಾರಿ. ಗುರುಗಳು ಗುರಿಯ ದಾರಿ. ಈ ಸತ್ಯವನ್ನ ಅರಿತುಕೊಂಡು ಪರೀಕ್ಷೆ ಬರೆಯಲು ಆರಂಭಿಸಿ. ಗೆಲುವು ನಿಮ್ಮನ್ನ ಕೈ ಹಿಡಿದು ದಡ ಮುಟ್ಟಿಸುವುದರಲ್ಲಿ ಯಾವುದೇ ಸಂಶಯವಿಲ್ಲ.
ಹೌದು… ಇಂದಿಂದ ಹತ್ತನೇ ವರ್ಗದ ಪರೀಕ್ಷೆ ಆರಂಭವಾಗುತ್ತಿದೆ. ಯಾವುದೇ ವಿದ್ಯಾರ್ಥಿಗಳು ಭಯದಿಂದ ಪರೀಕ್ಷೆ ಹಾಲ್‌ನ ಒಳಗಡೆ ಹೋಗುವ ಅವಶ್ಯಕತೆಯಿಲ್ಲ. ಏಕೆಂದರೆ, ಈ ಹಿಂದೆಯೂ ನಿಮ್ಮದೇ ಶಾಲೆಯಲ್ಲಿ ಹಲವು ಪರೀಕ್ಷೆಗಳನ್ನ ಬರೆದಿದ್ದೀರಿ ಮತ್ತೂ ಗೆಲುವಾಗಿದ್ದೀರಿ. ಇದು ಕೂಡಾ ಅಂತಹದ್ದೇ ಪರೀಕ್ಷೆ, ಸ್ಥಳ ಮಾತ್ರ ಬೇರೆಯದ್ದಾಗಿರತ್ತೆ.
ನಾನು ಓದಿಕೊಂಡಿರೋದು ಬರತ್ತೋ ಇಲ್ವೋ ಅನ್ನೋ ಸಣ್ಣ ಅಳುಕು ನಿಮ್ಮಲ್ಲಿಟ್ಟುಕೊಂಡು ಹೋಗಬೇಡಿ. ಯಾವುದೇ ಪ್ರಶ್ನೆ ಬಂದರೂ ಅದಕ್ಕೆ ಸರಿಯಾದ ಉತ್ತರ ಕೊಡುವ ಉಮೇದಿಯನ್ನ ಹೊಂದಿ. ಯಾವುದೇ ಅಳುಕಿಲ್ಲದೇ ಬರೆಯಲು ಆರಂಭಿಸಿದರೇ, ನೂರಕ್ಕೆ ನೂರರಷ್ಟು ಗೆಲುವು ನಿಮ್ಮದಾಗಿರತ್ತೆ.
ಧಾರವಾಡ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಎಲ್ಲ ವಿದ್ಯಾರ್ಥಿಗಳು ಪಾಸಾಗಲಿ ಎಂದು ಹಗಲಿರುಳು ತಮ್ಮ ಟೀಂನ್ನ ಕಟ್ಟಿಕೊಂಡು ಶ್ರಮಿಸಿದ್ದಾರೆ. ಧಾರವಾಡ ಜಿಲ್ಲೆಯನ್ನ ವಿದ್ಯಾಕಾಶಿ ಎಂಬುದನ್ನ ಮತ್ತೆ ಸಾಬೀತು ಮಾಡುವ ಹಂಬಲ ಅವರಲ್ಲಿದೆ. ಅದಕ್ಕೆ ಪ್ರತಿಯೊಬ್ಬ ವಿದ್ಯಾರ್ಥಿಯೂ ಸಾಥ್ ಕೊಡಬೇಕಿದೆ.
ಕೆಲ ಪಾಲಕರು ಮಕ್ಕಳಿಗೆ ಅತಿಯಾದ ಟಾರ್ಚರ್ ಕೊಡುವ ರೀತಿಯಲ್ಲಿ ನಡೆದುಕೊಳ್ಳುವುದನ್ನ ಪರೀಕ್ಷೆ ಸಮಯದಲ್ಲಿಯಾದರೂ ಬಿಡಬೇಕು. ನಿಮ್ಮ ಆಸೆಗಳನ್ನ ಮಕ್ಕಳ ಮೂಲಕ ಈಡೇರಿಸುವ ಕನಸು ಕಾಣುವುದು ಎಷ್ಟು ಅವಶ್ಯಕವೋ, ಅಷ್ಟೇ ಅವಶ್ಯಕ ಅವರ ಬುದ್ಧಿಮತ್ತೆ.
ಇಂದಿನಿಂದ ಆರಂಭವಾಗುತ್ತಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಎಲ್ಲರೂ ಚೆನ್ನಾಗಿ ಬರೀಲಿ. ಧಾರವಾಡ ಜಿಲ್ಲೆಯ ಹೆಸರನ್ನ ಉತ್ತುಂಗಕ್ಕೆ ತೆಗೆದುಕೊಂಡು ಹೋಗಲಿ ಎಂದು ಕರ್ನಾಟಕವಾಯ್ಸ್.ಕಾಂ ಕೂಡಾ ಹಾರೈಸತ್ತೆ.