Posts Slider

Karnataka Voice

Latest Kannada News

ಹುಬ್ಬಳ್ಳಿ ಬಳಿ “ಬಸ್ಸಲ್ಲಿ ವೃದ್ಧೆಗೆ ಕಪಾಳಮೋಕ್ಷ”- ‘ಬೋ…’ ಶಬ್ದವೇ ಕಾರಣ…

Spread the love

*Exclusive*

ನಿರ್ವಾಹಕಿಯನ್ನ ಅಸಹ್ಯವಾಗಿ ನಿಂದಿಸಿದ ವೃದ್ಧೆ

ತಾಳ್ಮೆ ಕಳೆದುಕೊಂಡ ನಿರ್ವಾಹಕಿ

ಬಸ್ ನಲ್ಲಿಯೇ ವೃದ್ಧೆಗೆ ಕಪಾಳಮೋಕ್ಷ ಮಾಡಿದ ನಿರ್ವಾಹಕಿ: ಕ್ರಮ ಕೈಗೂಳ್ಳುವರೇ ಅಧಿಕಾರಿಗಳು

ಹುಬ್ಬಳ್ಳಿ: ಕುಂದಗೋಳದಿಂದ ಹುಬ್ಬಳ್ಳಿಗೆ ಬರುತ್ತಿದ್ದ ಸರ್ಕಾರಿ ಬಸ್ಸಿನ ನಿರ್ವಾಹಕಿಯೊಬ್ಬರು ವೃದ್ಧೆಯ ಮೇಲೆ ಹಲ್ಲೆ ನಡೆಸಿದ ಘಟನೆ ಇಂದು ಬೆಳಗಿನ ಜಾವ ನಡೆದಿದ್ದು ನಿರ್ವಾಹಕಿಯ ವರ್ತನೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಂದು ಬೆಳ್ಳಿಗ್ಗೆ 7 ಗಂಟೆಗೆ ಕುಂದಗೋಳದಿಂದ ಹುಬ್ಬಳ್ಳಿಯತ್ತ ಬರುತ್ತಿದ್ದ ಮಾರ್ಗಮಧ್ಯ ಶೆರೇವಾಡ ಬಳಿ ನಿರ್ವಾಹಕಿ ವೃದ್ದ ಮಹಿಳೆಯ ಜೊತೆ ಜಗಳ ತೆಗೆದಿದ್ದಾರೆ. ಜಗಳ ಅತಿರೇಕಕ್ಕೆ ಹೋಗುತ್ತಿದ್ದ ಹಾಗೆ ನಿರ್ವಾಹಕಿ ವೃದ್ಧೆ ಎಂಬುದನ್ನು ನೋಡದೆ ವೃದ್ಧೆಗೆ ಕಪಾಳ ಮೋಕ್ಷ ಮಾಡಿದ್ದಾರೆ. ಇದನ್ನು ನೋಡುತ್ತಿದ್ದ ಸಹ ಪ್ರಯಾಣಿಕರು ತಮ್ಮ ಮೊಬೈಲ್ ನಲ್ಲಿ ಈ ವೀಡಿಯೋ ಸೆರೆ ಹಿಡಿದಿದ್ದಾರೆ.

ವೃದ್ಧೆ ಎಂಬುದನ್ನು ನೋಡದೆ ಪ್ರಯಾಣಿಕರ ಸಮ್ಮುಖದಲ್ಲಿಯೇ ಕಪಾಳ ಮೋಕ್ಷ ಮಾಡಿದ ನಿರ್ವಾಹಕಿಯ ಮೇಲೆ ಹಿರಿಯ ಸಾರಿಗೆ ಇಲಾಖೆಯ ಅಧಿಕಾರಿಗಳು ಯಾವ ರೀತಿಯಾದ ಕ್ರಮವನ್ನು ಕೈಗೂಳ್ಳುತ್ತಾರೆ ಎಂಬುದನ್ನು ಇದೀಗ ಕಾದು ನೋಡಬೇಕಿದೆ.


Spread the love

Leave a Reply

Your email address will not be published. Required fields are marked *