ಹುಬ್ಬಳ್ಳಿಯಲ್ಲಿ “ಚಕ್ಕರ್” ವಿಸಿಟ್- ಬಸ್ಸಲ್ಲೇ ಕಂಡಕ್ಟರ್‌ಗೆ ಹಾರ್ಟ್ ಅಟ್ಯಾಕ್… ‘ನಿಂತ ಉಸಿರು’…
1 min readಹುಬ್ಬಳ್ಳಿ: ನಗರ ಸಾರಿಗೆಯಲ್ಲಿ ಬಸ್ ಸಂಚರಿಸುತ್ತಿದ್ದಾಗಲೇ ತಪಾಸಣಾ ಅಧಿಕಾರಿ ಬಂದ ಕೆಲವೇ ಕ್ಷಣಗಳಲ್ಲಿ ನಿರ್ವಾಹಕ ಹೃದಯಾಘಾತದಿಂದ ಸಾವಿಗೀಡಾಗಿರುವ ಘಟನೆ ಈಗಷ್ಟೇ ವಿದ್ಯಾನಗರದಲ್ಲಿ ಸಂಭವಿಸಿದ್ದು, ಅಧಿಕಾರಿ ಪರಾರಿಯಾಗಿದ್ದಾರೆಂದು ಹೇಳಲಾಗಿದೆ.
ಕಿಮ್ಸ್ ಆಸ್ಪತ್ರೆಯಲ್ಲಿರುವ ನಿರ್ವಾಹಕನ ಮೃತ ದೇಹ…
ಮಹೇಶ ಹೂಗಾರ ಎಂಬ ನಿರ್ವಾಹಕರೇ ಹೃದಯಾಘಾತದಿಂದ ಸಾವಿಗೀಡಾದ ದುರ್ಧೈವಿಯಾಗಿದ್ದಾರೆ. ಹುಬ್ಬಳ್ಳಿಯ ಬಂಡಿವಾಡ ಅಗಸಿಯಿಂದ ಗಾಮನಗಟ್ಟಿಗೆ ಹೊರಟಿದ್ದ ಸಮಯದಲ್ಲಿ ಘಟನೆ ನಡೆದಿದೆ.
ತಪಾಸಣಾ ಅಧಿಕಾರಿ ವಿದ್ಯಾನಗರದ ಬಳಿ ಬಸ್ ನಿಲ್ಲಿಸಿ ಟಿಕೆಟ್ ಬುಕ್ ಪಡೆಯುತ್ತಿದ್ದ ಹಾಗೇ ಕಂಡಕ್ಟರ್ ಮಹೇಶ ಹೂಗಾರ, ಎದೆ ನೋವಿನಿಂದ ಕೆಳಗೆ ಬಿದ್ದಿದ್ದಾರೆ. ತಕ್ಷಣವೇ ತಪಾಸಣಾ ಅಧಿಕಾರಿ ಅಲ್ಲಿಂದ ಪರಾರಿಯಾಗಿದ್ದಾರೆ. ಆದರೆ, ಚಾಲಕ ಹರಸಾಹಸ ಮಾಡಿ ಕಿಮ್ಸಗೆ ತರುವುಷ್ಟರಲ್ಲಿಯೇ ನಿರ್ವಾಹಕ ಸಾವಿಗೀಡಾಗಿದ್ದಾರೆ.
ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಈಗಾಗಲೇ ಹಲವು ಸಮಸ್ಯೆಗಳನ್ನು ಸಿಬ್ಬಂದಿಗಳು ಎದುರಿಸುತ್ತಿದ್ದು, ಪ್ರತಿ ಕ್ಷಣವೂ ಆತಂಕದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದೇ ಇವತ್ತಿನ ದುರ್ಘಟನೆಗೆ ಕಾರಣವಾಗಿದೆ.